ಸಾಲಿಗ್ರಾಮ ಕ್ಷೇತ್ರಕ್ಕೆ ಶ್ಯಾಮ್ ಭಟ್ ಭೇಟಿ

saligrama
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಮ್ ಭಟ್ ಭೇಟಿ ನೀಡಿ ಸೋಣೆ ಆರತಿಯಲ್ಲಿ ಭಾಗವಹಿಸಿದರು.
Published on

ಕೋಟ: ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಮ್ ಭಟ್ಟ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳಕ್ಕೆ ಸೋಮವಾರ ಭೇಟಿ ನೀಡಿ ಸೋಣೆ ಆರತಿಯಲ್ಲಿ ಭಾಗವಹಿಸಿದರು.

ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶುಭಹಾರೈಸಿದರು. ಕ್ಷೇತ್ರದ ವತಿಯಿಂದ ಶ್ಯಾಮ್ ಭಟ್ಟರನ್ನು ಗೌರವಿಸಲಾಯಿತು. ಕೂ.ಮ.ಜ.ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಕಾರ್ಯದರ್ಶಿ ಮಹಾಬಲ ಹೇರ್ಳೆ, ಮಂಜುನಾಥ ಉಪಾಧ್ಯ, ಅಮರ ಹಂದೆ, ಗ್ರಾಮ ಮೊಕ್ತೇಸರ ವೃಂದದ ಚಿದಾನಂದ ತುಂಗ, ಮಹಿಳಾ ವೇದಿಕೆಯ ಕಾರ್ಯದರ್ಶಿ ಶಿವಪ್ರಭಾ ಅಲ್ಸೆ, ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಅರ್ಚಕ ಜನಾರ್ದನ ಅಡಿಗ, ಸಹಾಯಕ ಪ್ರಬಂಧಕ ಗಣೇಶ ಭಟ್ಟ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net