

ಕೊಳ್ಳೇಗಾಲ : ತೆಳ್ಳನೂರು-ಶಾಗ್ಯ ನಡುವೆ ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಿಗೆ ಮಂಗಳವಾರ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಣ್ಣು, ಬ್ರೆಡ್ ವಿತರಿಸಿ ಆರೋಗ್ಯ ವಿಚಾರಿಸಿದರು. ನಂತರ ನಗರಸಭೆ ಅಧ್ಯಕ್ಷೆ ರೇಖಾ ಮಾತನಾಡಿ, ಶಾಗ್ಯದ ಬಳಿ ಬಸ್ ಉರುಳಿ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅಧಿವೇಶನದಲ್ಲಿರುವ ಕಾರಣ ಅವರ ಪರವಾಗಿ ಬಂದಿದ್ದೇವೆ. ವ್ಯೆದ್ಯರೂ ಸೂಕ್ತ ಔಷಧೋಪಚಾರ ಮಾಡುತ್ತಿದ್ದಾರೆ ಎಂದರು.
ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್, ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಶಾಂತರಾಜು, ಪ್ರಕಾಶ್, ರಾಘವೇಂದ್ರ, ಧರಣೇಶ್, ಮಂಜುನಾಥ್, ನಾಗಣ್ಣ, ನಗರಸಭೆ ನಾಮ ನಿರ್ದೇಶನ ಸದಸ್ಯ ಸ್ವಾಮಿ ನಂಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಮುಖಂಡರಾದ ಜಗದೀಶ್ ಶಂಕನಪುರ, ಪ್ರಭುಸ್ವಾಮಿ, ಶ್ರೀಧರ, ಜಗದೀಶ ಇದ್ದರು.