ಆರೋಗ್ಯ ಇಲಾಖೆ ಅಧಿಕಾರಿಗಳಿಂದ ವಾರ್ಡ್‌ಗಳಿಗೆ ಭೇಟಿ

12 SARAG 2
ಸರಗೂರಿನ ಮೂರನೇ ವಾರ್ಡ್‌ನಲ್ಲಿ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಪಾರ್ಥಸಾರಥಿ, ಪುಟ್ಟಹನುಮಯ್ಯ ಶುಕ್ರವಾರ ಪರಿಶೀಲನೆ ನಡೆಸಿದರು.
Published on

ಸರಗೂರು: ತಾಲೂಕಿನ ಎಲ್ಲ 12 ವಾರ್ಡ್‌ಗಳಿಗೆ ಶುಕ್ರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಡೆಂೆ ಮತ್ತು ಚಿಕೂನ್ ಗುನ್ಯಾ ರೋಗಗಳು ಹರಡದಂತೆ ತಡೆಯಲು ಔಷಧ ಸಿಂಪಡಿಸಿದರು.

ಈ ವೇಳೆ ಮಾತನಾಡಿದ ಎಸ್.ಎಸ್.ಮಂಜುನಾಥ್, ಮಳೆಗಾಲದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಮನೆಯನ್ನು ಕಾಡುವಂತಹ ಸಮಸ್ಯೆಯೆಂದರೆ ಅದು ಜ್ವರ. ಅದರಲ್ಲೂ ಚಿಕೂನ್ ಗುನ್ಯಾ ಹಾಗೂ ಡೆಂೆ ಈ ಸಮಯದಲ್ಲಿ ಅತಿಯಾಗಿ ಕಾಡಲಿದೆ. ಇದಕ್ಕೆ ಮುಖ್ಯ ಕಾರಣ ಮಳೆ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದು. ಅವುಗಳ ಸಂತಾನಾಭಿವೃದ್ಧಿಯು ಆಗುವ ಜತೆಗೆ ಕೆಲವು ಮಾರಕ ಜ್ವರಗಳನ್ನು ಕೂಡ ಹರಡುವುದು. ಒಂದೊಂದು ರೀತಿಯ ಜ್ವರ ವಿವಿಧ ಬಗೆಯ ಸೊಳ್ಳೆಗಳಿಂದ ಹರಡಲಿದೆ. ಹೀಗಾಗಿ ಜ್ವರ ಬಂದ ಬಳಿಕ ಅದರ ಬಗ್ಗೆ ಕಡೆಗಣಿಸದೆ, ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಚಿಕೂನ್ ಗುನ್ಯಾ, ಡೆಂೆ ಎಲ್ಲವೂ ಸೊಳ್ಳೆಗಳಿಂದ ಮನುಷ್ಯನಿಂದ ಮನುಷ್ಯನಿಗೆ ಹರಡಲಿದೆ. ಈ ಮೂರು ಜ್ವರಗಳು ಭಿನ್ನ ವೈರಸ್ ಹಾಗೂ ಸೊಳ್ಳೆಗಳಿಂದ ಬರಲಿದೆ. ಆದರೆ ಮೂರೂ ಜ್ವರಗಳ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಇರಲಿದೆ ಎಂದು ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಪಾರ್ಥಸಾರಥಿ ಮಾತನಾಡಿ, ಅನಾಫಿಲೀಸ್ ಎನ್ನುವ ಸೊಳ್ಳೆಯಿಂದ ಪ್ಲಾಸ್ಮೊಡಿಯಂ ವೈರಸ್‌ನಿಂದಾಗಿ ಮಲೇರಿಯಾವು ಬರಲಿದೆ. ಈ ಸೊಳ್ಳೆಗಳು ಹೆಚ್ಚಾಗಿ ರಾತ್ರಿ ವೇಳೆ ಕಚ್ಚುತ್ತವೆ. ಹೀಗಾಗಿ ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆ, ಗುಡ್‌ನೈಟ್‌ಗಳು, ಕಿಟಕಿಗಳಿಗೆ ಪರದೆಗಳನ್ನು ಬಳಸಿ, ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮಾಹಿತಿ ನೀಡಿದರು. ಪಪಂ ಸಿಬ್ಬಂದಿ ರಾಮು, ಅರುಣ್, ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net