ಪಂಚ ಶಿವಲಿಂಗಗಳ ದರ್ಶನ

h3-brahamakumari
Published on

ಹುಬ್ಬಳ್ಳಿ: ಮಹಾಶಿವರಾತ್ರಿ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮಹಾನಗರದ ವಿವಿಧ ಬಡಾವಣೆ, ಅಮರಗೋಳ, ಸುತಗಟ್ಟಿ, ಗಾಮನಗಟ್ಟಿ, ಗಬ್ಬೂರ, ನೂಲ್ವಿ, ಶರೇವಾಡ, ಬ್ಯಾಹಟ್ಟಿ, ಅದರಗುಂಚಿ, ಛಬ್ಬಿ, ಮಣಕವಾಡ ಸೇರಿದಂತೆ ಇತರೆಡೆ ಇತ್ತೀಚೆಗೆ ಭವ್ಯ ಶಾಂತಿಯಾತ್ರೆ ಏರ್ಪಡಿಸಲಾಗಿತ್ತು.

ಬ್ರಹ್ಮಕುಮಾರೀಸ್ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಯಾತ್ರೆಗೆ ಚಾಲನೆ ನೀಡಿದರು. ಅಲಂಕೃತ ಕಾರು, ಟ್ರಾೃಕ್ಟರ್, ಪಂಚ ಶಿವಲಿಂಗಗಳು ಹಾಗೂ ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಶಾಂತಿಯಾತ್ರೆಯನ್ನು 5 ದಿನಗಳವರೆಗೆ ಆಯೋಜಿಸಲಾಗಿತ್ತು. ಸಹಸ್ರಾರು ಜನರು ದರ್ಶನ ಪಡೆದು ಪುನೀತರಾದರು. ಸಿದ್ಧಾರೂಢರ ಜಾತ್ರೆ ನಿಮಿತ್ತ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಮತ್ತು ಭೈರಿದೇವರಕೊಪ್ಪದ ಈಶ್ವರನಗರದ ಈಶ್ವರ ದೇವಸ್ಥಾನದಲ್ಲಿ ಚಿತ್ರಪ್ರದರ್ಶನ, ಶಿವಯೋಗ ಮತ್ತು ಶಿವದರ್ಶನ ಪ್ರವಚನ ಮಾಲಿಕೆ ಜರುಗಿತು.

ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್‌ನ ಸಂಸ್ಥಾಪಕ ಶ್ರೀಧರ ದಾವಸ್ಕರ್, ನಿರ್ಮಲಾಜಿ, ಕೃಷ್ಣ, ಚನ್ನಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net