

ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯಿತಿಗೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ಗುರುವಾರ ಭೇಟಿ ನೀಡಿ ನರೇಗಾ ಯೋಜನೆಯಡಿ ಪ್ರಗತಿ ಹಂತದ ನಾಲಾ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ, ಕೂಲಿಕಾರರೊಂದಿಗೆ ಯೋಜನೆಯ ಕುರಿತು ಚರ್ಚಿಸಿದರು.
ಗ್ರಾಮದ ಪ್ರತಿ ವಾರ್ಡ್‌ಗೆ ತೆರಳಿ ಜಿಡಬ್ಲ್ಯುಎಂ ಕಾಮಗಾರಿ ಅನುಷ್ಠಾನದ ಕುರಿತು ಹಾಗೂ ನರೇಗಾ ಯೋಜನೆಯಡಿ ನಿರ್ಮಿಸಿರುವ ಗ್ರಾಮೀಣ ಗೋದಾಮು ವೀಕ್ಷಣೆ ಮಾಡಿ ಬಳಕೆಯ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಿದರು.
ನಂತರ ಗ್ರಂಥಾಲಯ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲಿಸಿ ಶಿಕ್ಷಕರೊಂದಿಗೆ ಚರ್ಚಿಸಿದರು. ಶಾಲೆಯ ಎಲ್‌ಕೆಜಿ, ಯುಕೆಜಿ ತರಗತಿಗೆ ಹೋಗಿ ಮಕ್ಕಳ ಕುಶಲೋಪರಿ ವಿಚಾರಿಸಿದರು. ಬಳಿಕ ರೇಷ್ಮೆ ಇಲಾಖೆಯ ನರ್ಸರಿ ಗೆ ಭೇಟಿ ನೀಡಿ ವೀಕ್ಷಿಸಿದರು.