

ಧಾರವಾಡ: ಹುರಕಡ್ಲಿ ಅಜ್ಜ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ನಂದನ ಏರಿ ಜನಿವಾರ ಕತ್ತರಿಸಿದ ಘಟನೆ ಖಂಡಿಸಿರುವ ವಿಶ್ವ ಹಿಂದು ಪರಿಷದ್, ಬಜರಂಗದಳ ಹಿರಿಯರು ಮಂಗಳವಾರ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ವಿಶ್ವ ಹಿಂದು ಪರಿಷದ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪಾಜಿ, ಉತ್ತರ ಪ್ರಾಂತ ಉಪಾಧ್ಯಕ್ಷ ಕೆ. ಗೋವರ್ಧನ್ರಾವ್, ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ಎಸ್.ಆರ್. ರಾಮನಗೌಡರ, ಬಸವರಾಜ ಕೌಜಲಗಿ, ಶಿವಾನಂದ ಸತ್ತಿಗೇರಿ, ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ಆನಂದ ಸಂಗಮ, ವಿವೇಕ ಏರಿ ಇದ್ದರು.