ಕೋಟ ಅಮೃತೇಶ್ವರಿ ದೇಗುಲಕ್ಕೆ ಭೇಟಿ

bheti
Published on

ಕೋಟ: ಹೈಕೋರ್ಟ್ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಮತ್ತು ದಂಪತಿ ಕೋಟ ಅಮೃತೇಶ್ವರಿ ಹಲವು ಮಕ್ಕಳು ತಾಯಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಸ್ವಾಗತಿಸಿ ನ್ಯಾಯಾಧೀಶರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಹಾಗೂ ದೇವರ ಗಂಧ ಪ್ರಸಾದ ನೀಡಿ ಗೌರವಿಸಿದರು.

ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಾಯ ಜೋಗಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶಿವಪೂಜಾರಿ ಮಣೂರು ಪಡುಕೆರೆ, ಗಣೇಶ್ ಕೆ ನೆಲ್ಲಿಬೆಟ್ಟು, ಚಂದ್ರ ಆಚಾರ್ಯ ಕೋಟ, ಸುಭಾಸ್ ಶೆಟ್ಟಿ ಗಿಳಿಯಾರ್, ಸುಧಾ ಎ ಪೂಜಾರಿ ಕೋಟ, ಜ್ಯೋತಿ ದೇವದಾಸ ಕಾಂಚನ್, ರತನ್ ಐತಾಳ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net