ಕೊಪ್ಪ ಗ್ರಾಮಕ್ಕೆ ತಹಸೀಲ್ದಾರ್ ಅಧಿಕಾರಿಗಳೊಂದಿಗೆ ಭೇಟಿ

IMG-20240718-WA0083
ಕೊಪ್ಪ ಗ್ರಾಮದ ಮುಸ್ಲಿಂ ಮಸೀದಿ ಪಕ್ಕ ಕ್ರಿಶ್ಚಿಯನ್ ಮಂದಿರ ಜಲಾವೃತಗೊಂಡಿರುವುದನ್ನು ತಹಸೀಲ್ದಾರ್ ಕುಂಞ ಅಹಮದ್ ಆರ್ ಐ ಆನಂದ್ ಅವರು ಸ್ಥಳೀಯ ಗ್ರಾಮಸ್ಥರೊಂದಿಗೆ ಗುರುವಾರ ವೀಕ್ಷಿಸಿದರು.
Published on

ಬೈಲಕುಪ್ಪೆ: ಕೆಲವು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಾದ ಕೊಪ್ಪ ಗ್ರಾಮಕ್ಕೆ ತಹಸಿಲ್ದಾರ್ ಕುಂಞ ಅಹಮದ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ.ರಸ್ತೆ ಕಾವೇರಿ ನದಿ ಪಕ್ಕದಲ್ಲಿರುವ ಮಸೀದಿ ಸಮೀಪ ಇರುವ ಕ್ರಿಶ್ಚಿಯನ್ ಮಂದಿರ ನೀರಿನಿಂದ ಆವೃತವಾಗಿರುವುದನ್ನು ತಹಸೀಲ್ದಾರ್ ವೀಕ್ಷಿಸಿದರು. ಅಲ್ಲದೆ ಆವರ್ತಿ ಬ್ರಿಡ್ಜ್ ಅಕ್ಕಪಕ್ಕ ಜಮೀನಿನಲ್ಲಿ ರೈತರು ಬೆಳೆದ ಶುಂಠಿ, ಮುಸುಕಿನ ಜೋಳ, ಇನ್ನಿತರ ಬೆಳೆಗಳನ್ನು ವೀಕ್ಷಿಸಿದರು. ತರಿಕಲ್ ಗ್ರಾಮಕ್ಕೂ ಭೇಟಿ ನೀಡಿ ಮಳೆಯಿಂದ ವಾಸದ ಮನೆ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್, ಕೊಪ್ಪ, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಯಾರೂ ಆತಂಕಕ್ಕೆ ಒಳಗಾಗದೆ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರಿನಲ್ಲಿ ಸಿಲುಕಿದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಆವರ್ತಿ ಸುತ್ತಮುತ್ತ ರೈತರು ಬೆಳೆದ ಬೆಳೆ ಜಲಾವೃತಗೊಂಡಿರುವುದನ್ನು ಸಂಬಂಧಪಟ್ಟ ದಾಖಲಾತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕರಿಕಲ್ ಗ್ರಾಮದಲ್ಲಿ ಮಳೆಯಿಂದ ಎರಡು ವಾಸದ ಮನೆ ಗೋಡೆ ಕುಸಿದಿರುವ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net