ಕೊಡಗು ವೈದ್ಯಕೀಯ ಸಂಸ್ಥೆಗೆ ಭೇಟಿ

koyimasa
Published on

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಕೋವಿಡ್-೧೯ ಸಂಧರ್ಭದಲ್ಲಿ ಆಕ್ಸಿಜನ್ ಫಾರ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಅಮೇರಿಕಾದ ಮೀರಾ ವೆಲ್ಸ್, ಡಾ.ಶುಭಾ ವರ್ಮಾ ಮತ್ತು ತಂಡದವರು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಡಾ.ಮೀರಾ ವೆಲ್ಸ್ ಅವರ ಪತಿ ಕೋರ್ಟ್‌ಲ್ಯಾಂಡ್, ನಿವೃತ ಐಎಎಸ್ ಅಧಿಕಾರಿಯಾದ ಎ.ಕೆ.ಮೊಣ್ಣಪ್ಪ ಮತ್ತು ಸ್ಥಳೀಯ ವೈದ್ಯ ಡಾ.ಸಣ್ಣುವಂಡ ಕಾವೇರಪ್ಪ ಭೇಟಿ ನೀಡಿದರು.

ಈ ಸಂಧರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್, ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಹಾಜರಿದ್ದು, ತಂಡದೊಂದಿಗೆ ಸಂವಾದ ನಡೆಸಿದರು.

ವಿದೇಶದ ಆರೋಗ್ಯ ತಂತ್ರಜ್ಞಾನ ಮತ್ತು ಈ ದೇಶದ ಆರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಅಗತ್ಯತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ಡಾ.ಕಾವೇರಪ್ಪ ಅವರು ಧನ್ಯವಾದ ಸಲ್ಲಿಸಿ ಭವಿ?್ಯದಲ್ಲಿ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ನಿರಂತರ ಬೆಂಬಲವನ್ನು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net