ಹೊಟ್ಯಾಪುರ ಮಠಕ್ಕೆ ಶ್ರೀಶೈಲ ಡಾ. ಚನ್ನಸಿದ್ಧರಾಮ ಶ್ರೀ ಭೇಟಿ

mkg1b
Published on

ಸಾಸ್ವೆಹಳ್ಳಿ: ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿರುವುದು ವೀರಶೈವ ಲಿಂಗಾಯತ ಸಮಾಜಕ್ಕಷ್ಟೇ ಅಲ್ಲ, ಈ ಭಾಗದ ಭಕ್ತ ಸಮೂಹಕ್ಕೂ ತುಂಬಲಾರದ ನಷ್ಟ ಎಂದು ಶ್ರೀಶೈಲ ಡಾ. ಚನ್ನಸಿದ್ಧರಾಮ ದೇಶಿಕೇಂದ್ರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹೋಬಳಿಯ ಹೊಟ್ಯಾಪುರ ಹಿರೇಮಠಕ್ಕೆ ಗುರುವಾರ ಭೇಟಿ ನೀಡಿ ಲಿಂಗೈಕ್ಯ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಕ್ರಿಯಾಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಹುಟ್ಟು- ಸಾವು ಒಂದೇ ನಾಣ್ಯದ ಎರಡು ಮುಖಗಳು. ಶ್ರೀಗಳು ಇಷ್ಟು ಬೇಗ ದೊಡ್ಡದಾದ ಭಕ್ತ ಸಮೂಹವನ್ನು ತಬ್ಬಲಿಯಾಗಿ ಮಾಡುತ್ತಾರೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಭಗವಂತನ ಇಚ್ಛೆಗೆ ನಾವೆಲ್ಲ ತಲೆಬಾಗಲೇಬೇಕು ಎಂದು ಹೇಳಿದರು.

ಉಜ್ಜನಿ ಶ್ರೀಗಳು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಓಂಕಾರಯ್ಯ ಅವರನ್ನು ನೇಮಿಸಿರುವುದು ಸಂತೋಷದ ವಿಚಾರ ಎಂದರು.
ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net