ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ

29Anand3
ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಾಳೇಶ ಶೇಗುಣಶಿ, ಡಾ.ಮಂಜುನಾಥ ಚೌರಡ್ಡಿ, ಎಸ್.ಎಂ.ವಾರದ, ಡಾ.ಎಸ್.ಎಸ್.ಹಿರೇಮಠ ಇತರರಿದ್ದರು.
Published on

ನೇಸರಗಿ: ಕಬ್ಬಿನ ಉತ್ತಮ ಬೆಳೆಗಾಗಿ ಕಾಲಕಾಲಕ್ಕೆ ಸರಿಯಾಗಿ ಕೀಟನಾಶಕ ಸಿಂಪಡಣೆ ಸೇರಿದಂತೆ ವಿವಿಧ ಮಾಹಿತಿಗಾಗಿ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಸಂಬಂಧಿತ ತಂತ್ರಜ್ಞಾನದ ಮಾಹಿತಿ ಪಡೆದುಕೊಳ್ಳುವಂತೆ ಮರಕುಂಬಿ ಇನಾಮದಾರ್ ಶುಗರ್‌ನ ಕಬ್ಬು ವ್ಯವಸ್ಥಾಪಕ ಬಾಳೇಶ ಶೇಗುಣಶಿ ಸಲಹೆ ನೀಡಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ ಪರಿಶಿಷ್ಟ ಜಾತಿ ವಿಶೇಷ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಕಬ್ಬಿನಲ್ಲಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಗೊಣ್ಣೆ ಹುಳು, ಬಿಳಿ ಉಣ್ಣೆ ಹಾಗೂ ಬೇರು ಕೊರೆಯುವ ಹುಳು ಇತ್ಯಾದಿಗಳ ಸಮಗ್ರ ಕೀಟ ನಿರ್ವಹಣೆ ಬಗ್ಗೆ ವಿವರಿಸಿದರು. ವಿಜ್ಞಾನಿ ಎಸ್.ಎಂ. ವಾರದ ಮಾತನಾಡಿದರು. ಕೇಂದ್ರದ ಸಸ್ಯ ಸಂರಕ್ಷಣೆ, ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ, ಬೇಸಾಯ ಶಾಸ್ತ್ರ, ವಿಜ್ಞಾನಿ ಜಿ.ಬಿ.ವಿಶ್ವನಾಥ, ವಿಜ್ಞಾನಿ ಪ್ರವೀಣ ಯಡಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net