ದೇವಸ್ಥಾನಗಳಿಗೆ ಹರಿಹರಪುರದ ಶ್ರೀಗಳ ಭೇಟಿ

h6-hariharapura swamjij
Published on

ಹುಬ್ಬಳ್ಳಿ: ಇಲ್ಲಿಯ ಪುಣೆ-ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಹೊಸಮಠಕ್ಕೆ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಶನಿವಾರ ಭೇಟಿ ನೀಡಿದರು. ನಂತರ ಉಣಕಲ್ ಗ್ರಾಮದ ಪುರಾತನ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ವೀಕ್ಷಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಕಲ್ಲಿನ ಕಟ್ಟಡ ಪರಿಶೀಲಿಸಿದ ಶ್ರೀಗಳು, ಶೀಘ್ರವಾಗಿಯೇ ಸಿದ್ಧವಾಗಲೆಂದು ಹಾರೈಸಿದರು. ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿ ಪಂಚ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ಎಸ್.ಐ.ನೇಕಾರ, ರಾಮಣ್ಣ ಪದಮಣ್ಣವರ, ಮಹಾದೇವಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಬೆಂಗೇರಿ, ರಮೇಶ ಕೊರವಿ, ಗುರು ಸೂರ್ಯವಂಶಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ರಮೇಶ ಕಾಂಬಳೆ ಸಿದ್ದು ಮಾಯಣ್ಣವರ, ಶೇಖಣ್ಣ ಸೂರ್ಯವಂಶಿ, ಶಿವಣ್ಣ ಶಿರಗುಪ್ಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net