ಶೃಂಗೇರಿಗೆ ದ್ವಾರಕಾಪೀಠದ ಶ್ರೀಗಳ ಭೇಟಿ

sri- swamiji
ಶೃಂಗೇರಿ ಉಭಯ ಜಗದ್ಗುರುಗಳನ್ನು ದ್ವಾರಕಾಪೀಠದ ಶ್ರೀ ಸದಾನಂದ ಸರಸ್ವತಿಜೀ ಮಹಾರಾಜ್ ಭೇಟಿ ಮಾಡಿದರು.
Published on

ಶೃಂಗೇರಿ: ದ್ವಾರಕಾಪೀಠದ ಶ್ರೀ ಸದಾನಂದ ಸರಸ್ವತಿಜೀ ಮಹಾರಾಜ್ ಮಂಗಳವಾರ ಸಂಜೆ ಶ್ರೀ ಶಾರದಾ ಮಠಕ್ಕೆ ಭೇಟಿ ನೀಡಿದ್ದರು.

ಶ್ರೀ ಶಾರದಾಪೀಠದಿಂದ ಸ್ವಾಮೀಜಿ ಅವರನ್ನು ಪೂರ್ಣಕುಂಭದೊಂದಿಗೆ ಸಿಬ್ಬಂದಿ, ಋತ್ವಿಜರು ಸ್ವಾಗತಿಸಿದರು. ಶ್ರೀ ದ್ವಾರಕಾ ಪೀಠಾಧಿಪತಿಗಳು ಶೃಂಗೇರಿ ಶಾರದೆ ಹಾಗೂ ಶ್ರೀ ಶಂಕರಾಚಾರ್ಯ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರನ್ನು ಭೇಟಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net