

ಕೋಟ: ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಹಾಗೂ ಕರ್ನಾಟಕ ಜಂಗಮ ಕ್ಷೇಮ ಭಿವೃದ್ಧಿ ಮಹಾಸಭಾ ಅಧ್ಯಕ್ಷ ಬಂಗಾರೇಶ್ ಹಿರೇಮಠ್, ಕೆಪಿಸಿಸಿ ಪದಾಧಿಕಾರಿ ಸುರೇಶ ಸವಣೂರ, ಬಾಂಡ್ ಉದ್ಯಮಿ ರಫೀಕ್ ದೊಡ್ಡಮನಿ ಭೇಟಿ ನೀಡಿದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ದೇವಿಯ ಪ್ರಸಾದ ನೀಡಿ ಗೌರವಿಸಿದರು. ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಾಯ ಜೋಗಿ, ಸುಧಾ ಎ.ಪೂಜಾರಿ, ಸುಭಾಸ್ ಶೆಟ್ಟಿ, ಗಣೇಶ್ ಕೆ.ನೆಲ್ಲಿಬೆಟ್ಟು, ಜ್ಯೋತಿ ಡಿ.ಕಾಂಚನ್, ರತನ್ ಐತಾಳ್, ಕಾಂಗ್ರೆಸ್ ಮುಖಂಡರಾದ ಉಣಕಲ್ ಪ್ರಕಾಶ್ ಶೆಟ್ಟಿ, ಅಪ್ಪಣ್ಣ ಕಮ್ಮಾರ, ಸೂರ್ಯಕಾಂತ್ ಗೋಡ್ಕೆ ಹಾಗೂ ದೇವಸ್ಥಾನ ವ್ಯವಸ್ಥಾಪಕ ಗಣೇಶ್ ಹೊಳ್ಳ ಉಪಸ್ಥಿತರಿದ್ದರು.