ಹಾಲಿನ ಡೇರಿಗೆ ಬಿಕಾಂ ವಿದ್ಯಾರ್ಥಿಗಳ ಭೇಟಿ

Oplus_2
ಯಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಡೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು.
Published on

ಸೋಮವಾರಪೇಟೆ: ಆಲೇಕಟ್ಟೆ ರಸ್ತೆಯಲ್ಲಿರುವ ಹಾಲು ಸಂಗ್ರಹ ಡೇರಿಗೆ ಇತ್ತೀಚೆಗೆ ಭೇಟಿ ನೀಡಿದ ಯಡೂರು ಬಿಟಿಸಿಜಿ ಕಾಲೇಜಿನ ವಿದ್ಯಾರ್ಥಿಗಳು, ಹೈನುಗಾರಿಕೆ ಕುರಿತು ರೈತರು, ಡೈರಿ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಡೇರಿಗೆ ಭೇಟಿ ನೀಡಿದ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಾದ ಕಾವ್ಯಾ, ಅಂಕಿತಾ, ಚೈತನ್ಯಾ ಡೈರಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸರ್ಕಾರದಿಂದ ಹೈನುಗಾರರಿಗೆ ಸಿಗುವ ಸವಲತ್ತು, ಫೀಡ್ಸ್, ಔಷಧಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಂದ್ರ ವಿವರಣೆ ಒದಗಿಸಿದರು.

ಹಾಲಿನ ಗುಣಮಟ್ಟ, ಹವಾಮಾನ ವೈಪರೀತ್ಯದಿಂದ ಹಾಲಿನ ಉತ್ಪಾದನೆ ಮೇಲೆ ಆಗುವ ಏರಿಳಿತ, ಹಸುಗಳ ಸಾಕಣೆ, ಮೇವು, ಹಾಲಿನ ಸಾಗಾಟ, ಸಂಗ್ರಹ, ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net