ಗಣಪತಿ ಪ್ರತಿಷ್ಠಾಪನೆ ಸ್ಥಳಕ್ಕೆ ಶಾಸಕ ಮಂತರ್‌ಗೌಡ ಭೇಟಿ

09Kush02
ಕೂಡಿಗೆ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ್ ನ ದರ್ಶನ ಪಡೆದ ಶಾಸಕ ಡಾ.ಮಂತರ್ ಗೌಡ. ಶಶಿಧರ್, ಟಿ.ಪಿ.ಹಮೀದ್, ಅರುಣ್, ರಕ್ಷಿತ್ ಕುಮಾರ್ ಇತರರು ಹಾಜರಿದ್ದರು.
Published on

ಕುಶಾಲನಗರ: ತಾಲೂಕಿನ ಕೂಡಿಗೆ ಗ್ರಾಪಂ ವ್ಯಾಪ್ತಿಯ ದಿಡ್ಡಳ್ಳಿ, ಕೂಡಿಗೆ ಸರ್ಕಲ್, ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಹಾರಂಗಿ, ಸುಂದರನಗರ, ಕುಶಾಲನಗರದ ಮಾದಪಟ್ಟಣ ಮತ್ತು ಗುಡ್ಡೆಹೊಸೂರಿನ ಹೊಸಕಾಡು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ವಿಘ್ನ ವಿನಾಯಕ ಎಲ್ಲರಿಗೂ ಸನ್ನಮಂಗಲವನ್ನು ಉಂಟುಮಾಡಲಿ. ನಾಡಿನಲ್ಲಿ ಜನರು ಶಾಂತಿ, ಸೌಹಾರ್ದಯುತವಾಗಿ ಬದುಕಲು ಸನ್ನಮಾರ್ಗವನ್ನು ದಯಪಾಲಿಸಲಿ. ಪ್ರತಿ ಹಳ್ಳಿಯಲ್ಲೂ ರೈತರು, ವರ್ತಕರು ಸೇರಿದಂತೆ ಎಲ್ಲರಿಗೂ ಶುಭವಾಗಲಿ ಎಂದು ಕೂಡಿಗೆಯ ಸರ್ಕಲ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ.ಹಮೀದ್, ಅರುಣ್ ರಾವ್, ಅನಂತ, ಶಿವಕುಮಾರ್, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಅಣ್ಣಯ್ಯ, ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ರಕ್ಷೀತ್ ಕುಮಾರ್, ಕಾರ್ಯದರ್ಶಿ ಡಿ.ಉಮೇಶ್, ಗೌರವಾಧ್ಯಕ್ಷ ಪ್ರಮೀಣ್ ಸೇರಿದಂತೆ ಸಮಿತಿಯ ನಿರ್ದೇಶಕರು ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net