

ಮಡಿಕೇರಿ:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಭಾಸ್ಕರ ರಾವ್ ಮಡಿಕೇರಿಯ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಶತಮಾನ ಭವನಕ್ಕೆ ಶುಕ್ರವಾರ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು, ಸದಸ್ಯತ್ವ ಹಣ ಪಾವತಿಸಲು ಸಾಧ್ಯವಾಗದವರು ಕೂಡ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ತಾವೇ ಅವರ ಸದಸ್ಯತ್ವ ಹಣ ಪಾವತಿಸಿ ಸದಸ್ಯತ್ವ ನೀಡಲಾಗುವುದು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ನೇತೃತ್ವದಲ್ಲಿ ಇದೀಗ ಬ್ರಾಹ್ಮಣರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತರಲಾಗಿದೆ. ವಿಪ್ರರ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಶಿಕ್ಷಣಕ್ಕೆ ರಾಜ್ಯ ಸಂಘದಿಂದ ಹೆಚ್ಚಿನ ಸಹಾಯ ನೀಡಲಾಗುವುದು. ಜಿಲ್ಲೆಯ ವಿಪ್ರ ಸಂಘಟನೆಗಳ ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳ ಬಗ್ಗೆ ಇದೇ ಸಂದರ್ಭ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ರವೀಂದ್ರ, ಸಂಘದ ಅಧ್ಯಕ್ಷೆ ಗೀತಾ ಗಿರೀಶ್, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಹಿರಿಯರಾದ ಸಂಪತ್ ಕುಮಾರ್ ಸರಳಾಯ, ಕೋಶಾಧಿಕಾರಿ ಜಿ.ಆರ್. ರವಿಶಂಕರ್ ಇತರರು ಇದ್ದರು.