ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರಕ್ಕೆ ಸಂಶೋಧಕರ ನಿಯೋಗ ಭೇಟಿ

visit
Published on

ಮಡಿಕೇರಿ:

ಮಡಿಕೇರಿ ತಾಲೂಕು ಅಪ್ಪಂಗಳದಲ್ಲಿ ಇರುವ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರಕ್ಕೆ ಕೃಷಿ, ಪಶುಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ಭೇಟಿ ನೀಡಿತ್ತು. ಸಂಸದ ಚರಣ್ ಜಿತ್ ಸಿಂಗ್ ಚನ್ನಿ ಅವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಲೋಕಸಭೆಯ 12, ರಾಜ್ಯಸಭೆಯ 4 ಸದಸ್ಯರು ಹಾಗೂ ಲೋಕಸಭಾ ಸಚಿವಾಲಯದ ಅಧಿಕಾರಿಗಳು ಇದ್ದರು.

ಐಸಿಎಆರ್-ಐಐಎಸ್‌ಆರ್ ಅಭಿವೃದ್ಧಿಪಡಿಸಿದ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ಇದೇ ಸಂದರ್ಭ ಆಯೋಜಿಸಿಲಾಗಿತ್ತು. ಚರಣ್ ಜಿತ್ ಸಿಂಗ್ ಚನ್ನಿ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಈ ಸಭೆಯಲ್ಲಿ ಕೋಜಿಕೋಡ್‌ನ ಐಸಿಎಆರ್-ಐಐಎಸ್‌ಆರ್ ನಿರ್ದೇಶಕ ಡಾ. ಆರ್. ದಿನೇಶ್, ಸಂಸ್ಥೆಯ ಚಟುವಟಿಕೆಗಳು ಮತ್ತು ಸಾಧನೆಗಳ ಸಮಗ್ರ ಅವಲೋಕನವನ್ನು ಪ್ರಸ್ತುತ ಪಡಿಸಿದರು. ಸಮಿತಿಯು ಐಸಿಎಆರ್-ಐಐಎಸ್‌ಆರ್‌ನ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದಾತ್ಮಕ ಚರ್ಚೆ ನಡೆಸಿತು.

ನವದೆಹಲಿ ಐಸಿಎಆರ್‌ನ ಸಹಾಯಕ ಮಹಾನಿರ್ದೇಶಕ ಡಾ. ಸುಧಾಕರ್ ಪಾಂಡೆ, ಐಸಿಎಆರ್-ಐಐಎಸ್‌ಆರ್, ಪ್ರಾದೇಶಿಕ ಕೇಂದ್ರ, ಅಪ್ಪಂಗಳದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎಸ್. ಜೆ. ಅಂಕೇಗೌಡ, ಐಸಿಎಆರ್-ಐಐಎಸ್‌ಆರ್ ಮತ್ತು ಅದರ ಪ್ರಾದೇಶಿಕ ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭ ಇದ್ದರು.ಉಪಸ್ಥಿತರಿದ್ದರು. ಇದೇ ಸಂದಭ್ ಮರಗೋಡುವಿನ ಪ್ರಗತಿಪರ ರೈತ ಮಹಿಳೆ ಪ್ರೇಮಾ ಗಣೇಶ್ ಸಂಬಾರ ಬೆಳೆಗಳ ಕೃಷಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊAಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net