ನಿರ್ಗತಿಕರ ಸೇವೆಯಲ್ಲಿ ವಿಠ್ಠಲನ ದರ್ಶನ

P PURA KODUGEE 6 (2)
Published on

ಪರಶುರಾಮಪುರ: ನಿರ್ಗತಿಕರು, ಅಶಕ್ತರ ಸೇವೆಯಲ್ಲಿ ವಿಠ್ಠಲನ ದರ್ಶನ ದೊರೆಯಲಿದೆ ಎಂದು ಗ್ರಾಪಂ ಸದಸ್ಯೆ ಸುಜಾತಾ ಸಿದ್ದೇಶ ಹೇಳಿದರು.

ಗೊಲ್ಲಾಳ್ಳೇಶ್ವರಿದೇವಿ ಮಹಿಳಾ ಸ್ವ ಸಹಾಯ ಸಂಘ ವತಿಯಿಂದ ಎನ್.ಜಯಣ್ಣ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶ್ರೀಕೃಷ್ಣಜನ್ಮಾಷ್ಟಮಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಗೊಲ್ಲಾಳ್ಳೇಶ್ವರಿದೇವಿ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ತಾಯಮ್ಮ ಮಕ್ಕಳಿಗೆ ಲೇಖನ ಸಾಮಾಗ್ರಿ, ಸಿಹಿ ವಿತರಿಸಿದರು.

ಶಾಲಾ ಸಮಿತಿ ಅಧ್ಯಕ್ಷೆ ವೀಣಮ್ಮ, ಮುಖಂಡರಾದ ಮಿಲ್ಟ್ರಿ ಸಿದ್ದೇಶಣ್ಣ, ಮಂಜಣ್ಣ, ತಿಮ್ಮಕ್ಕ, ಮುಖ್ಯಶಿಕ್ಷಕ ಆರ್.ಶಿವಣ್ಣ, ಶಿಕ್ಷಕ ಕೆ.ವೀರಭದ್ರಪ್ಪ, ಶಿವಮ್ಮ, ಲಕ್ಷ್ಮೀದೇವಿ, ನರಸಪ್ಪ, ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net