

ಚಿಕ್ಕಬಳ್ಳಾಪುರ: ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಬೈಕುಗಳನ್ನು ನೀಡಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುನೈಟೆಡ್ ವೇ ಬೆಂಗಳೂರು, ಲ್ಯಾಬ್ ಕಾರ್ಪ್ ಅರ್ಲಿ ಡೆವಲಪ್ ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಲ್ಯಾಬ್ ಕಾರ್ಪ್ ಲ್ಯಾಬೊರೇಟರೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ 20 ಇ-ಬೈಕ್ ಗಳನ್ನು ವಿತರಿಸಿದರು.ಚಿಕ್ಕಬಳ್ಳಾಪುರ 4, ಚಿಂತಾಮಣಿ 6, ಗೌರಿಬಿದನೂರು 4, ಗುಡಿಬಂಡೆ 2 ಮತ್ತು ಶಿಡ್ಲಘಟ್ಟಗೆ 4 ಸೇರಿದಂತೆ 20 ಇ-ಬೈಕ್ ದೊರಕಿದ್ದು ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವಾದ 'ಗ್ರಾಮೀಣ ರೈಸಿಂಗ್' ಅನ್ನು ಕಾರ್ಯಗತಗೊಳಿಸಲು ಯುನೈಟೆಡ್ ವೇ, ಲ್ಯಾಬ್ ಕಾರ್ಪ್ ಅರ್ಲಿ ಡೆವಲಪ್ ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಲ್ಯಾಬ್ ಕಾರ್ಪ್ ಲ್ಯಾಬೊರೇಟರೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬೆಂಬಲದೊಂದಿಗೆ ಶ್ರಮಿಸುತ್ತಿದ್ದು ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಜೀವನೋಪಾಯ ಮತ್ತು ಪರಿಸರವನ್ನು ಹೆಚ್ಚಿಸುವ ಬದ್ಧತೆಯೊಂದಿಗೆ ಸಮುದಾಯಗಳನ್ನು ಉನ್ನತಿಕರಿಸುವ ಸಾಮೂಹಿಕ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸುತ್ತಿದೆ. ಯುನೈಟೆಡ್ ವೇ ವರ್ಲ್ಡ್ ವೈಡ್ ನ ಒಂದು ಭಾಗವಾಗಿದ್ದು ಇದು 37 ದೇಶಗಳಲ್ಲಿ 1,100 ಕ್ಕೂ ಹೆಚ್ಚು ನೆಟ್ ವರ್ಕ್ ಹೊಂದಿದೆ. 2008 ರಿಂದ ಸೌಲಭ್ಯ ವಂಚಿತ ಸ್ಥಳಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 16 ವರ್ಷಗಳಲ್ಲಿ, ಸಂಸ್ಥೆಯ ವ್ಯಾಪ್ತಿಯು ಕರ್ನಾಟಕವನ್ನು ಮೀರಿ ಹನ್ನೊಂದು ಇತರ ರಾಜ್ಯಗಳಿಗೆ ವಿಸ್ತರಿಸಿದೆ. ದೂರದ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ವಿಶೇಷ ಗಮನ ಹರಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಯುನೈಟೆಡ್ ವೇ ನ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಫಲಾನುಭವಿಗಳು ಹಾಜರಿದ್ದರು.