

ಸುಳ್ಯ: ಪುತ್ತೂರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವತಿಯಿಂದ ಬಣ್ಣದ ಮಹಾಲಿಂಗರ ನೆನಪಿನಲ್ಲಿ ನಡೆಯುವ ಯಕ್ಷ ಪಯಣ ‘ಬಣ್ಣದಜ್ಜನ ಸ್ಮತಿಯಾನ’ ಕಾರ್ಯಕ್ರಮ ದೇಲಂಪಾಡಿ ಮಯ್ಯಾಳದ ಶ್ರೀಹರಿ ನಿವಾಸದಲ್ಲಿ ನಡೆಯಿತು.
ಬಣ್ಣದ ಮಹಾಲಿಂಗ ಸಂಸ್ಮರಣೆ, ಬಣ್ಣದ ಮಹಾಲಿಂಗ ಯಕ್ಷ ಸ್ಮತಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಗುರು ವಿಶ್ವವಿನೋದ ಬನಾರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಪಂಜತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದರಾದ ಎಂ.ರಮಾನಂದ ರೈ ದೇಲಂಪಾಡಿ ಬಣ್ಣದ ಮಹಾಲಿಂಗ ಸಂಸ್ಮರಣೆ ಮಾಡಿದರು. ಲೇಖಕರಾದ ನಾರಾಯಣ ತೋರಣಗುಂಡಿ ಅಭಿನಂದನಾ ಭಾಷಣ ಮಾಡಿದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿದರು. ಬಣ್ಣದ ಮಹಾಲಿಂಗ ಸ್ಮತಿಯಾನ ಕಾರ್ಯಕ್ರಮದ ಸಂಚಾಲಕ ಸುಬ್ಬಪ್ಪ ಪಟ್ಟೆ ವಂದಿಸಿದರು. ರಮೇಶ್ ದೇಲಂಪಾಡಿ, ಸುಖೇಶ್ ದೇಲಂಪಾಡಿ, ಸಚಿನ್ ದೇಲಂಪಾಡಿ, ಶೋಭಿತಾ ಮತ್ತಿತರರಿದ್ದರು.
ಯಕ್ಷಗಾನ ತಾಳಮದ್ದಳೆ
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂದ ಕಲಾವಿದರಿಂದ ‘ಶ್ರೀಹರಿ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ನಾರಾಯಣ ತೋರಣಗುಂಡಿ, ನಿತೀಶ್ ಕುಮಾರ್ ಎಂಕಣ್ಣಮೂಲೆ, ದಯಾನಂದ ಪಾಟಾಳಿ ಮಯ್ಯಾಳ, ಚಂಡೆಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ನಾರಾಯಣ ಪಾಟಾಳಿ ಮೈಯಾಳ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಗೋಪಾಲಕೃಷ್ಣ ಪಂಜತ್ತೊಟ್ಟಿ, ರಮಾನಂದ ರೈ ದೇಲಂಪಾಡಿ, ನಾರಾಯಣ ದೇಲಂಪಾಡಿ, ರಾಮನಾಯ್ಕ ದೇಲಂಪಾಡಿ ಭಾಗವಹಿಸಿದ್ದರು.