ಹುಬ್ಬಳ್ಳಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜ್ಞಾನ ಪೀಠದ ಶತಮಾನ ಕಂಡಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲ ಪ್ರವೇಶಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ರೂಪಿಸಿರುವ ನೀಲನಕ್ಷೆಯಂತೆ ವ್ಯಾಪಕ ಅಧ್ಯಯನದ ಅವಕಾಶಗಳು ಈಗ ಲಭ್ಯವಾಗಿವೆ.
ಕಾಶಿ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲವು ವೀರಶೈವ ಮಠ-, ಪೀಠಗಳಿಗೆ ವಿವಿಧ ಮಠಾಧೀಶರು, ಜಗದ್ಗುರುಗಳು ಹಾಗೂ ಖ್ಯಾತ ವಿದ್ವಾಂಸರನ್ನು ನಾಡಿಗೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಗುರುಕುಲದ ಶತಮಾನೋತ್ಸವ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಗುರುಕುಲದಲ್ಲಿ ಹಿಂದಿ ಮತ್ತು ಸಂಸತ ಭಾಷೆಗಳ ಜೊತೆಗೆ ಭಾರತೀಯ ಪ್ರಾಚಿನ ಶಾಸ್ತ್ರಗಳಾದ ನ್ಯಾಯ, ವ್ಯಾಕರಣ, ವೇದಾಂತ, ಸಾಹಿತ್ಯ ಮೊದಲಾದ ವಿಷಯಗಳನ್ನು ತಜ್ಞ ವಿದ್ವಾಂಸರು ಬೋಧಿಸುವರು. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ -ಅಧ್ಯಾಪನಕ್ಕೆ ನಿಗದಿ ಪಡಿಸಲಾದ ಪಠ್ಯ ಪುಸ್ತಕಗಳ ಕುರಿತು ಗುರುಕುಲದಲ್ಲಿಯೇ ಪೂರಕ ಚಿಂತನೆ ನಡೆಯಲಿದೆ.
ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿರುವ ವೀರಶೈವ ಧರ್ಮದ ವಿಭಿನ್ನ ಮಠಗಳ ಮರಿದೇವರು, ಉತ್ತರಾಧಿಕಾರಿಗಳು, ವಟುಗಳು ಮತ್ತು ವಿದ್ಯಾಥಿರ್ಗಳು ಗುರುಕುಲ ಪ್ರವೇಶಕ್ಕೆ ಅಜಿರ್ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 8ನೇ ತರಗತಿ ಅಥವಾ 10ನೇ ತರಗತಿಗಳಲ್ಲಿ ಸಂಸತ ವಿಷಯವನ್ನು ತೆಗೆದುಕೊಂಡು ಉತ್ತೀರ್ಣರಾದವರು ಅಥವಾ ಕರ್ನಾಟಕದ ಸಂಸತ ಪರೀಕ್ಷೆಗಳಲ್ಲಿ ಪ್ರಥಮ ಇಲ್ಲವೆ ಕಾವ್ಯ ಪರೀಕ್ಷೆಗಳನ್ನು ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯಲ್ಲಿ ಪೂರ್ಣ ಹೆಸರು, ಅಂಚೆ ವಿಳಾಸ, ವೈಯಕ್ತಿಕ ವಿವರಗಳು, ದೂರವಾಣಿ ಸಂಖ್ಯೆ ನಮೂದಿಸಬೇಕು. ಅಜಿರ್ಯ ಜೊತೆಗೆ ಪೂರ್ವಾಧ್ಯಯನದ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಬೇಕು.
ಆಸಕ್ತರು, ಶ್ರೀಶೈಲ ಶಾಸ್ತ್ರೀಗಳು, ಪ್ರಾಚಾರ್ಯರು, ಶ್ರೀ ಸಿದ್ದಲಿಂಗ ಶಿವಾಚಾರ್ಯ ವೇದಾಗಮ ಸಂಸತ ಪಾಠಶಾಲೆ, ಶ್ರೀಕ್ಷೇತ್ರ ಯಡೂರು & 591213, ತಾ. ಚಿಕ್ಕೋಡಿ, ಜಿ. ಬೆಳಗಾವಿ. ಮೊ 9008967789. ಈ ವಿಳಾಸಕ್ಕೆ ಜೂನ್ 25ರೊಳಗೆ ಅಜಿರ್ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದವರು ಜೂನ್ 2-7-ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಯಡೂರ ಕ್ಷೇತ್ರದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆ ಕಾಶಿ ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.