ತಿರುಪತಿ ಘಟನೆ ಹಿಂಧು ಧರ್ಮಕ್ಕೆ ಮಾಡಿದ ಅಪಚಾರ

UDP-22-1-PejavaraShree
Published on

| ಉಡುಪಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಖಂಡನೆ

| ಹಿಂದು ಸಂಸ್ಥೆಗಳಿಗೆ ದೇಗುಲದ ಆಡಳಿತ ಹಸ್ತಾಂತರಿಸಲು ಆಗ್ರಹ

ಉಡುಪಿ: ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ನಡೆಯುತ್ತಿದ್ದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಘಟನೆ ಹಿಂದು ಧರ್ಮಕ್ಕೆ ಮತ್ತು ದೇವರಿಗೆ ಬಗೆದಿರುವ ದೊಡ್ಡ ಅಪಚಾರ. ಇದರಲ್ಲಿ ಅಲ್ಲಿನ ಹಿಂದಿನ ಸರ್ಕಾರವೇ ಭಾಗಿಯಾಗಿರುವುದು ಅತ್ಯಂತ ಖೇದದ ಸಂಗತಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಖಂಡಿಸಿದ್ದಾರೆ.

ಅಕ್ಷಮ್ಯ, ಅತ್ಯಂತ ಖೇದಕರ

ಲಡ್ಡು ಪ್ರಸಾದಕ್ಕೆ ಆಕಳ ತುಪ್ಪದ ಬದಲು ಅನೇಕ ಪ್ರಾಣಿಜನ್ಯ ಕೊಬ್ಬಿನ ಮಿಶ್ರಣದಿಂದ ಕೃತಕ ಹಾಗೂ ಕಲಬೆರಕೆಯ ತುಪ್ಪ ಬಳಸಿರುವುದು ಅಕ್ಷಮ್ಯ. ಆ ವಿಚಾರ ಕೇಳಿ ಅತ್ಯಂತ ಖೇದವಾಗಿದೆ. ಇದು ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲೆ ಗೈದಿರುವಂತಹ ದೊಡ್ಡ ಹಲ್ಲೆಯಾಗಿದೆ. ನಕಲಿ ತುಪ್ಪ ತಯಾರಿಸುವ ಅಡ್ಡೆಗಳನ್ನು ಪತ್ತೆ ಮಾಡಿ ಅವರನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಇದು ಸರ್ಕಾರದ ಕರ್ತವ್ಯ.

ಎಲ್ಲಿಯೂ ಘಟನೆ ಮರುಕಳಿಸದಿರಲಿ

ವಿಶೇಷವಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿ ಇರುವುದು ಸರಿಯಲ್ಲ. ಅದು ಹಿಂದು ಸಂಸ್ಥೆಗಳ ಕೈಯಲ್ಲಿರಬೇಕಾದದ್ದು ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪು ಯಾಕೆ ಸತ್ಯ ಎನ್ನುವುದು ತಿರುಪತಿ ಘಟನೆಯಿಂದ ಸಾಬೀತಾಗುತ್ತಿದೆ. ಹೀಗಾಗಿ ತಡ ಮಾಡದೆ ತಿರುಪತಿ ದೇಗುಲವನ್ನು ಸರ್ಕಾರದ ಸ್ವಾಧೀನದಿಂದ ವಿಮುಕ್ತಿಗೊಳಿಸಿ ಅದನ್ನು ಸಾರ್ವಜನಿಕ ಹಿಂದು ಸಂಸ್ಥೆಗಳಿಗೆ ನೀಡಬೇಕಾದದ್ದು ಈಗ ಮೊದಲ ಕರ್ತವ್ಯವಾಗಿದೆ. ಇನ್ನುಮುಂದೆ ಎಲ್ಲಿಯೂ ಸಹ ತಿರುಪತಿಯಲ್ಲಿ ನಡೆದಂತಹ ದುರ್ಘಟನೆ ಮರುಕಳಿಸಬಾರದು ಎಂದು ಪೇಜಾವರ ಶ್ರೀ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net