ವಿಶ್ವಪ್ರಕಾಶ ಮಲಗೊಂಡಗೆ ಬೆಸ್ಟ್​ ಆಕ್ಟರ್​ ಪ್ರಶಸ್ತಿ

Vishwaprakash Malagonda Best Actor Award
ಬೆಂಗಳೂರಿನಲ್ಲಿ ಇತ್ತೀಚೆಗೆ ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್​ ಫೀಲಂ ಕೌನ್ಸಿಲ್​ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಜಯಪುರದ ಚಿತ್ರನಟ ವಿಶ್ವಪ್ರಕಾಶ ಮಲಗೊಂಡ ಅವರಿಗೆ ಬೆಸ್ಟ್​ ಆಕ್ಟರ್​ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿರ್ದೇಶಕ ಎಂ.ಎ. ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್​, ಆಂಧ್ರಪ್ರದೇಶ ಫೀಲಂ ಚೆಂಬರ್​ ಅಧ್ಯ ಅಂಬಾಟಿ ಮಧು ಮೋಹನ ಕೃಷ್ಣ ಇತರರಿದ್ದರು.
Published on

ವಿಜಯಪುರ: ಬೆಂಗಳೂರಿನ ವೈಡ್​ಫೀಲ್ಡ್​ನಲ್ಲಿರುವ ಎನ್ಸಾಟೋ ರೀ ಕ್ರಿಯೇಷನ್​ ಹಬ್​ನಲ್ಲಿ ಇತ್ತೀಚೆಗೆ ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್​ ಫೀಲಂ ಕೌನ್ಸಿಲ್​ ಆಯೋಜಿಸಿದ್ದ ನಾಲ್ಕನೇ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಜಯಪುರದ ಉದಯೋನ್ಮುಖ ಚಿತ್ರನಟ, ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡ ಅವರಿಗೆ "ಬೆಸ್ಟ್​ ಆಕ್ಟರ್​' ಪ್ರಶಸ್ತಿ ಲಭಿಸಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವಪ್ರಕಾಶ ನಾಯಕ ನಟನಾಗಿ ನಟಿಸಿರುವ "ತುಷಾರ್​' ಚಿತ್ರವೂ ಸೇರಿದಂತೆ 150ಕ್ಕೂ ಅಧಿಕ ಚಲನಚಿತ್ರಗಳು ಸ್ಪರ್ಧೆಯಲ್ಲಿದ್ದವು. ನಿರ್ದೇಶಕ ಎಂ.ಎ. ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್​, ಆಂಧ್ರಪ್ರದೇಶ ಫೀಲಂ ಚೆಂಬರ್​ ಅಧ್ಯ ಅಂಬಾಟಿ ಮಧು ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟ ಅವರು ವಿಶ್ವಪ್ರಕಾಶ ಮಲಗೊಂಡ ಅವರಿಗೆ ಅತ್ಯುತ್ತಮ ನಟ ಎಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಕೆಜಿಎ್​ ಸಿನಿಮಾ ಸಾಹಿತ್ಯ ರಚನೆಕಾರ ಹಾಗೂ ನಿರ್ದೇಶಕ ಕಿನ್ನಾಳ ರಾಜ, ದಿಲೀಪ್​ ಕುಮಾರ್​, ಜಮ್ಮು&ಕಾಶ್ಮಿರದ ಜಯೇಶ ಗುಪ್ತಾ, ಪ್ರಭುರಾಮ ರೆಡ್ಡಿ, ಸೂಪರ್​ಸ್ಟಾರ್​ ಸಂಪಾದಕ ಅಸ್ಲಾಂ, ಆನಂದ ಗುಪ್ತಾ, ನಿರ್ದೇಶಕ ನಿರ್ಮಾಪಕ ಸುನೀಲ್​ ಕುಮಾರ್​, ಹಿರಿಯ ಕಲಾವಿದರು, ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಉದ್ದಿಮೆದಾರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net