ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವಿಶ್ವನಾಥ ಅಧ್ಯಕ್ಷ

SRT HALU
Published on

ಶಿರಹಟ್ಟಿ: ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಕಪ್ಪತ್ತನವರ ಮತ್ತು ಉಪಾಧ್ಯಕ್ಷರಾಗಿ ಚಂದ್ರು ಸಿದ್ದಪ್ಪ ಜಿಡಗಣ್ಣವರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಶ್ವನಾಥ ಕಪ್ಪತ್ತನವರ ಮಾತನಾಡಿ, ಸಂಘ ಕಳೆದ 37 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘ ಸ್ಥಾಪನೆಯಾದಾಗಿನಿಂದ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ ಬಂದಿರುವುದು ಸಂಘದ ಒಗ್ಗಟ್ಟಿಗೆ ಹಿಡಿದ ಕನ್ನಡಿ. ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ವಿವಿಧ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಶ್ರಮಿಸಲಾಗುವುದು ಎಂದರು.

ನಿರ್ದೇಶಕರ ಸ್ಥಾನಕ್ಕೆ ಶಿವನಗೌಡ ಯಲ್ಲಪ್ಪಗೌಡ ಪಾಟೀಲ, ಸಂದೀಪ ಬಸಲಿಂಗಪ್ಪ ಕಪ್ಪತ್ತನವರ, ಶರಣ್ಣಪ್ಪ ವೀರಪ್ಪ ಅಕ್ಕಿ, ಮತ್ತು ವಿಜಯಲಕ್ಷ್ಮಿ ಬಸವರಾಜ ಬಂತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಸವರಾಜ ನಿಡಗುಂದಿಮಠ ಕಾರ್ಯ ನಿರ್ವಹಿಸಿದರು.

ನಿಂಗಪ್ಪ ತುಳಿ, ವೀರಪ್ಪ ಕಲ್ಯಾನಿ, ಗೌಸಪೀರ ಮಕಾಂದಾರ, ಸಾವಿತ್ರಿ ನವಲಿ, ಶಾಂತವ್ವ ತಳವಾರ, ಶಿವಾನಂದ ಕುರಿ, ಶಂಕ್ರಪ್ಪ ವರವಿ, ಸಂಘದ ಕಾರ್ಯದರ್ಶಿ ಸುರೇಶ್ ವರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net