

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕು ಚಿಕ್ಕೊಪ್ಪ (ಕೆ.ಎಸ್) ಗ್ರಾಮದ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ ಮಂಡಿಸಿದ "ಮೊಬೈಲ್ ಆಧಾರಿತ ಪತ್ರಿಕೋದ್ಯಮ: ಸವಾಲುಗಳು ಮತ್ತು ಅವಕಾಶಗಳು" ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ ಡಿ ಪ್ರದಾನ ಮಾಡಿದೆ. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್. ಎಂ. ಮಾಲಗತ್ತಿ ಅವರು ಮಾರ್ಗದರ್ಶನ ಮಾಡಿದ್ದಾರೆ.