

ಚಿತ್ರದುರ್ಗ: ಜಿಲ್ಲಾಡಳಿತ ಡಿ.29ರಂದು ವಿಶ್ವಮಾನವ ಹಾಗೂ ಜನವರಿ 1ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಗಳನ್ನು ನಗರದ ತರಾಸು ರಂಗಮಂದಿರದಲ್ಲಿ ಆಚರಿಸಲಾಗುವೆಂದು ಎಡಿಸಿ ಇ.ಬಾಲಕೃಷ್ಣ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಈ ದಿನಾಚರಣೆಗಳ ಪೂರ್ವಭಾವಿಯಲ್ಲಿ ಮಾತನಾಡಿ,ವಿಶ್ವಮಾನವ ದಿನದ ಅಂಗವಾಗಿ ಕುವೆಂಪು ಅವರ ವಿಶ್ವಮಾನವ ಸಂದೇಶ ಕುರಿತು ಪ್ರೌಢಶಾಲೆ,ಪ.ಪೂ. ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡ ಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಮಾತನಾಡಿ,ರಾಷ್ಟ್ರಕವಿ ಕುವೆಂಪು ಅವರ ಕುರಿತು ಉಪನ್ಯಾಸಕ ಡಾ.ಬಿ.ಎಂ. ಗುರುನಾಥ್ ಅವರಿಂದ ಉಪನ್ಯಾಸ ನೀಡಲಿದ್ದಾರೆ ಎಂದರು. ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನದಂದು ಬೆಳಗ್ಗೆ 9ಕ್ಕೆ ನಗರದ ಬುರುಜನಹಟ್ಟಿ ವಿಶ್ವಕರ್ಮ ದೇವಾಲಯದಿಂದ ವಿವಿಧ ಕಲಾ ತಂಡಗಳೊಂದಿಗೆ ತರಾಸು ರಂಗಮಂದಿರದವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ನಡೆಯಲಿದೆ.
11ಕ್ಕೆ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಕಣಾಚಾರಿ ಅವರ ಕುರಿತು ಪಿ.ಎಸ್.ರವಿಶಂಕರ್ ಉಪನ್ಯಾಸ ನೀಡಲಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಸಮಾಜದ ಮುಖಂಡರು ಸಕ್ರಿಯವಾಗಿ ಭಾಗಹಿಸಿ,ಜಕಣಾಚಾರಿ ಸಂಸ್ಮರಣಾ ದಿನವನ್ನು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಆಚರಿಸ ಬೇಕೆಂದು ಮನವಿ ಮಾಡಿದರು. ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಸಮಾಜದ ಒಬ್ಬರಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಜಿಲ್ಲಾ ಡಳಿತದಿಂದ ಸನ್ಮಾನಿಸುವಂತೆ ಸಮಾಜದ ಮುಖಂಡರು ಕೋರಿದರು.
ತಹಸೀಲ್ದಾರ್ ಸತ್ಯನಾರಾಯಣ,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್,ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ,ಪ.ಪೂ.ಶಿಕ್ಷಣ ಇಲಾಖೆ ಡಿಡಿ ಎನ್.ರಾಜು,ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮತ್ತಿತರರ ಅಧಿಕಾರಿಗಳಿದ್ದರು.
---