

ತುಮಕೂರು: ವಿಶ್ವಕರ್ಮ ಸಮುದಾಯದ ಜನ ಕಲೆಗೆ ಹೆಸರಾಗಿದ್ದು, ಶ್ರಮಜೀವಿಗಳು. ಕುಲಕಸುಬಿಗೆ ಅಂಟಿ ಕೂರದೇ ವಿದ್ಯಾವಂತರಾಗಿ ನಾನಾ ಕ್ಷೇತ್ರಗಳಲ್ಲೂ ಉದ್ಯೋಗವಕಾಶವ ಪಡೆದು ಪ್ರಗತಿ ಸಾಧಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಸಮುದಾಯದ ಹಿತರಕ್ಷಣೆಯಲ್ಲಿ ಸದಾ ನಿಮ್ಮ ಜತೆ ಇರಲಿದ್ದು, ನಗರದ ವಿಶ್ವಕರ್ಮ ಸಮುದಾಯದ ಅರ್ಹರಿಗೆ ಶ್ರೀ ಸರ್ಕಾರಿ ಸಂಸ್ಥೆಯಲ್ಲಿ ನಾಮ ನಿರ್ದೇಶನದ ಅವಕಾಶ ಕಲ್ಪಿಸಲಾಗುವುದು ಎಂದರು.
ಕರೊನಾ ಕಾರಣಕ್ಕೆ ಸರ್ಕಾರದ ಅನುದಾನಗಳು ಬಹುತೇಕ ವಿಳಂಬವಾಗಿವೆ, ಬೃಹತ್ ಪ್ರವಾಣದಲ್ಲಿ ನಡೆಯಬೇಕಿದ್ದು, ಜಯಂತಿಗಳು ಸರಳ ಆಚರಣೆಗೆ ಸೀಮಿತವಾಗಿವೆ. ಜೀವ ಉಳಿಸಿಕೊಳ್ಳುವುದು ಮುಖ್ಯ. ಸಮುದಾಯದ ಧಾರ್ಮಿಕ, ಸಾವಾಜಿಕ ಸೇವಾ ಕಾರ್ಯಗಳಿಗೆ ಸಂದರ್ಭಾನುಸಾರ ಅಗತ್ಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜಚಾರ್ ವಾತನಾಡಿ, ವಿಶ್ವಕರ್ಮ ಸಮುದಾಯ ಪಂಚ ಕುಲಕಸುಬನ್ನು ವಾಡುತ್ತಾ ಬರುತ್ತಿದ್ದು, ವಿಶ್ವದ ಕಲೆ ವಾಸ್ತುಶಿಲ್ಪಕ್ಕೆ ಅಪರಿಮಿತ ಕೊಡುಗೆ ನೀಡಿದ್ದಾರೆ. ಬೇಲೂರು ಹಳೇಬೀಡು, ಸೋಮನಾಥಪುರದ ದೇಗುಲಗಳ ಸಮುದಾಯದ ಕಲಾಕಾರರ ಕುಶಲತೆಗೆ ಸಾಕ್ಷಿಪ್ರಜ್ಞೆಯಂತಿದೆ ಎಂದರು.
ಸಮುದಾಯಕ್ಕೆ ರಾಜಕೀಯವಾಗಿ ಅವಕಾಶವಿಲ್ಲವಾಗಿದ್ದು, ಜನಾಂಗದ ಅರ್ಹರಿಗೆ ಸರ್ಕಾರ ನಾಮನಿರ್ದೇಶನದ ಮೂಲಕ ಅವಕಾಶ ಕಲ್ಪಿಸಬೇಕು ಎಂದು ಶಾಸಕರಲ್ಲಿ ಕೋರಿದರು. ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮೀ ಸಂಸ್ಥಾನ ಮಠದ ಶ್ರೀನೀಲಕಂಠಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ‌್ಯಕ್ರಮಕ್ಕೂ ಮುನ್ನ ಚಿಕ್ಕಪೇಟೆಯ ಕಾಳಿಕಾಂಬಾ, ವಿಶ್ವಕರ್ಮ, ಬಸವಣ್ಣ ದೇವಾಲಯ ಹಾಗೂ ಪಾಂಡುರಂಗನಗರದ ಗಾಯತ್ರಿ ವಿಶ್ವಕರ್ಮ, ವೀರಬ್ರಹ್ಮೇಂದ್ರಸ್ವಾಮಿ ದೇವಾಲಯ ಹಾಗೂ ನಿಗಮದ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಸಿಹಿ ವಿತರಿಸಲಾಯಿತು. ಸವಾಜದ ಮುಖಂಡ ಎಚ್.ಎಸ್.ವೆಂಕಟರಮಣಚಾರ್, ಬಿ.ವಿ.ಗಂಗಾರಾಜಾಚಾರ್, ಎನ್.ವಿಶ್ವಮೂರ್ತಿ, ನರಸಿಂಹಸ್ವಾಮಿ ಇದ್ದರು.
ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡುವ ನಿಟ್ಟಿನಲ್ಲಿ ಸಮುದಾಯದ ಮುಖಂಡರಿಗೆ ನಿಗಮ, ಮಂಡಳಿಯಲ್ಲಿ ನೇಮಕಾತಿ ಯಲ್ಲಿ ನಾಮನಿರ್ದೇಶನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಶುಭಸುದ್ದಿ ಬರಬಹುದು. ಜಿ.ಬಿ.ಜ್ಯೋತಿಗಣೇಶ್ ಶಾಸಕ