

ಕೆರೂರ : ಪಟ್ಟಣದ ವಿಶ್ವಕರ್ಮ ಸಮಾಜದವರು ಭಾನುವಾರ ಸಂಭ್ರಮದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.
ಕಾಳಿಕಾದೇವಿ ದೇವಸ್ಥಾನದಲ್ಲಿ ಸಮಾಜ ಬಾಂಧವರು ವಿಶೇಷ ಪೂಜೆ, ಅಭಿಷೇಕ, ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಸಲ್ಲಿಸಿದರು. ಗ್ರಾಮ ದೇವತೆಗಳ ದೇವಸ್ಥಾನದಿಂದ ಕುಂಭಮೇಳ, ಕಳಸಾರತಿ, ಸಕಲ ಮಂಗಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಮಾಜದ ಮುಖಂಡ ಮಹೇಶ ಬಡಿಗೇರ ಮಾತನಾಡಿ, ಒಂದು ವಸ್ತುವಿಗೆ ಸುಂದರ ರೂಪ ನೀಡುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಬಹಳ ಮುಖ್ಯ ಎಂದರು.
ಕಾಳಪ್ಪ ಬಡಿಗೇರ, ಶಂಕ್ರಪ್ಪ ಬಡಿಗೇರ, ಚೇತನ ಬಡಿಗೇರ, ಬಸವರಾಜ ಬಡಿಗೇರ, ಶ್ರೀಕಾಂತ ಬಡಿಗೇರ, ರಾು ಬಡಿಗೇರ, ರಮೇಶ ಕೊಣ್ಣೂರ, ಸುರೇಶ ಬಡಿಗೇರ, ಶಿವಪ್ಪ ಬಡಿಗೇರ ಇದ್ದರು.
ಕೆರೂರ ಪಟ್ಟಣದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.