

ಚನ್ನಗಿರಿ: ವಿಶ್ವಕರ್ಮ ಅಭಿವೃದ್ಧಿ ಹೊಂದುತ್ತಿರುವ ಸಮಾಜವಾಗಿದೆ. ಹುಟ್ಟಿದಾಗಿನಿಂದ ಸಾಯುವ ತನಕ ಪ್ರತಿಯೊಬ್ಬರ ಜೀವನದಲ್ಲಿ ವಿಶ್ವಕರ್ಮರ ಕೊಡುಗೆ ಅತ್ಯವಶ್ಯಕವಾಗಿದೆ ಎಂದು ಚನ್ನಗಿರಿ ತಾಲೂಕು ದಂಡಾಧಿಕಾರಿ ಪಿ.ಎಸ್.ಯರ‌್ರಿಸ್ವಾಮಿ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ನಾಡಹಬ್ಬಗಳ ಸಮಿತಿ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಭಾನುವಾರ ಮಾತನಾಡಿದರು.
ಜಯಂತಿ ಆಚರಣೆಗೆ ಸರ್ಕಾರ ಸಹಕಾರ ನೀಡಿದೆ. ವಿಶ್ವಕರ್ಮರಿಗಾಗಿ ಅಭಿವೃದ್ಧ್ದಿ ನಿಗಮ ಸ್ಥಾಪನೆ ಆಗಿದೆ. 2023 ಜನವರಿ 1ರಂದು ಜಕಣಜಾರಿ ಜಯಂತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಶಪ್ಪ ಎರೇಹಳ್ಳಿ, ಮಾಜಿ ಅಧ್ಯಕ್ಷ ಶಂಕರಾಚಾರ್, ಚಂದ್ರಚಾರಿ, ಮಲ್ಲೇಶಾಚಾರ್ ಇದ್ದರು.