ವಿಶ್ವಕರ್ಮ ಸೇವಾ ಸಂಘ ವಾರ್ಷಿಕೋತ್ಸವ

vishwakarma
Published on

ಪಡುಬಿದ್ರಿ: ಎಲ್ಲೂರು ಪಣಿಯೂರು ವಿಶ್ವಕರ್ಮ ಸಮಾಜ ಸೇವಾ ಸಂಘ ವಾರ್ಷಿಕೋತ್ಸವ, ವಿಶ್ವಕರ್ಮ ಪೂಜೆ ಭಾನುವಾರ ನಡೆಯಿತು.

ಸಂಘದ ಅಧ್ಯಕ್ಷ ವೈ.ಕಿಶೋರ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವ್ಯಾಪ್ತಿಯೊಳಗೆ ಬರುವ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ಸ್ವಸಮಾಜದ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿ ತೇರ್ಗಡೆಯಾದ ಶ್ರೇಯಸ್ ಆಚಾರ್ಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೂಡುಮಟ್ಟಾರಿನ ಶಿಲಾಶಿಲ್ಪಿ ಸೂರ್ಯಕಾಂತ್ ಆಚಾರ್ಯ, ಕೃಷಿಕ ವೈ.ಪ್ರಶಾಂತ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಿವಪ್ರಸಾದ್ ಮಲೆಬೆಟ್ಟು ಮಾತನಾಡಿದರು. ಕೋಶಾಧಿಕಾರಿ ಕೆ.ಗುರುಪ್ರಸಾದ್ ಆಚಾರ್ಯ ಸಂಘದ ಮುಂದಿನ ಯೋಜನೆ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net