ವಿಶ್ವಕರ್ಮ ಪೂಜೆ, ಮಹಾಸಭೆ, ಪದಾಧಿಕಾರಿಗಳ ಆಯ್ಕೆ

sanmana-1
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮದಲ್ಲಿ ಪದ್ಮನಾಭ ಆಚಾರ್ಯ ದಂಪತಿ ಮತ್ತು ಶೈಕ್ಷಣಿಕ ಸಾಧಕಿ ಪ್ರೀಯಾ ಆಚಾರ್ಯ ತಣ್ಣೀರು ಅವರನ್ನು ಸನ್ಮಾನಿಸಲಾಯಿತು. ಕೇಶವ ಆಚಾರ್ಯ, ರವೀಂದ್ರ ಪುರೋಹಿತ್, ಸುರೇಂದ್ರ ಆಚಾರ್ಯ ಮೊದಲಾದವರಿದ್ದರು
Published on

ಹೆಬ್ರಿ: ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಯುವ ವೃಂದದ ಸಹಕಾರದಲ್ಲಿ ಸೋಮವಾರ 41ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಮತ್ತು ವಾರ್ಷಿಕ ಮಹಾಸಭೆ ನಡೆಯಿತು. ಯಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ ಮುಂದಾಳತ್ವದಲ್ಲಿ ಪೂಜೆ ನೆರವೇರಿತು.

ಶ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಮುದ್ರಾಡಿ ಯೂನಿಯನ್ ಬ್ಯಾಂಕ್ ಅಧಿಕಾರಿ ಚೆನ್ನಕೇಶವ ಎಸ್.ಶಿವಮೊಗ್ಗ ಶುಭಹಾರೈಸಿದರು. ಪದ್ಮನಾಭ ಆಚಾರ್ಯ ದಂಪತಿ ಮತ್ತು ಶೈಕ್ಷಣಿಕ ಸಾಧಕಿ ಪ್ರೀಯಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೇಶವ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಬ್ಯಾಂಕ್ ನಿವೃತ್ತ ಅಧಿಕಾರಿ ಟಿ.ಜಿ.ಆಚಾರ್ಯ, ಸಂಘದ ಉಪಾಧ್ಯಕ್ಷ ಕೇಶವ ಆಚಾರ್ಯ, ಕೋಶಾಧಿಕಾರಿ ರವೀಂದ್ರ ಪುರೋಹಿತ್, ಸುರೇಂದ್ರ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಸುಗುಣಾ ಎಸ್. ಆಚಾರ್ಯ, ಯುವ ವೃಂದ ಅಧ್ಯಕ್ಷ ಸಂತೋಷ ಆಚಾರ್ಯ ಇದ್ದರು. ರಾಜೇಶ ಆಚಾರ್ಯ ಸ್ವಾಗತಿಸಿದರು. ಪ್ರೇಮಾ ಎಂ. ವರಂಗ ಮತ್ತು ರತ್ನಾಕರ ಆಚಾರ್ಯ ಶಿವಪುರ ಸನ್ಮಾನಪತ್ರ ವಾಚಿಸಿದರು. ಪ್ರಸನ್ನ ಆಚಾರ್ಯ ಮಠದಬೆಟ್ಟು ವಂದಿಸಿದರು. ಎಚ್.ಎಂ.ಶಶಿಶಂಕರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net