ವಿಶ್ವಕರ್ಮ ರಾಷ್ಟ್ರೀಯ ಸಮ್ಮೇಳನ

Ksd_Vishwakarma
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‌ವಿಎಫ್) ರಾಷ್ಟ್ರೀಯ ಸಮ್ಮೇಳನ ಮತ್ತು ಜಿಲ್ಲಾ ಕುಟುಂಬ ಸಂಗಮ ಕಾಸರಗೋಡಿನಲ್ಲಿ ಜರುಗಿತು. ಜಗದ್ಗುರು ಅನಂ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳು ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.

ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‌ವಿಎಫ್) ಅಧ್ಯಕ್ಷ ಎಂ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ರಾಘವನ್ ದೊಡ್ಡವಯಲ್, ರಾಜ್ಯಾಧ್ಯಕ್ಷ ಸಿ.ಕೆ.ಅಂಬಿ, ರಾಷ್ಟ್ರೀಯ ಉಪಾಧ್ಯಕ್ಷೆ ಶಶಿ ಪಾಕರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು, ಜಿಲ್ಲಾ ಕಾರ್ಯದರ್ಶಿ ಶ್ಯಾಮಲಾ ಸೂರ್ಯನ್, ರಾಜ್ಯ ಉಪಾಧ್ಯಕ್ಷರಾದ ಪಿ.ಕೆ.ವಿಜಯನ್ ವರದಿ ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ವಿಷ್ಣು ಆಚಾರ್ಯ, ಸತೀಶ ಕಾನಡುಕ್ಕರ, ಸುಮೇಶ್ ವಲ್ಲಚಿರ, ಸಂತೋಷ್ ಕಯ್ಯೂರ್, ನಿಶಾ ಚಂದ್ರನ್, ಕೆ.ಎಂ.ಗೀತಾ ತೃಶ್ಶೂರ್, ಶ್ರೀಪ್ರಿಯಾ ಪಾಲಕ್ಕಾಡ್, ಕೆ.ಜಯಶೀಲನ್, ಕೆ.ಪುರುಷೋತ್ತಮ ಆಚಾರ್ಯ, ಎ.ಕೆ.ರಾಮಕೃಷ್ಣನ್, ಗೋಪಾಲಕೃಷ್ಣನ್ ತೃಶ್ಶೂರ್ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಠರಾವು ಮಂಡಿಸಲಾಯಿತು. ಎನ್‌ವಿಎಫ್‌ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ರಾಷ್ಟ್ರೀಯ ಅಧ್ಯಕ್ಷ- ಸೀತಾರಾಮ ಆಚಾರ್ಯ, ಪ್ರಧಾನ ಕಾರ್ಯದರ್ಶಿ-ರಾಘವನ್ ಕೊಳತ್ತೂರು, ಕೋಶಾಧಿಕಾರಿ-ಸುಮೇಶ ವಲ್ಲಚಿರ, ಜಿಲ್ಲಾ ಸಮಿತಿ ಅಧ್ಯಕ್ಷ -ವಿಷ್ಣು ಆಚಾರ್ಯ, ಜಿಲ್ಲಾ ಕಾರ್ಯದರ್ಶಿ-ನಿಶಾ ಚಂದ್ರನ್ ಹಾಗೂ ಓಮನಾ ಅಂಬಿ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net