

ಗಲಗಲಿ: ಗ್ರಾಮದ ಗ್ರಾಮದೇವತೆ ಗುಡಿಯಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದವರು ಶನಿವಾರ ವಿಶ್ವಕರ್ಮ ಜಯಂತ್ಯುತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಜಯಂತಿ ನಿಮಿತ್ತ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ.ಗೋವಿಂದಾಚಾರ್ಯ ನೇತೃತ್ವದಲ್ಲಿ ನಡೆದವು. ಗ್ರಾಮದ ವಿವಿಧ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಂಗಲವಾದ್ಯ ಹಾಗೂ ಪುರವಂತರ ಸೇವೆಯೊಂದಿಗೆ ಸಂಚರಿಸಿತು. ಕಷ್ಣಾನದಿಗೆ ಪೂಜೆ ಸಲ್ಲಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.
ಚಂದ್ರಕಾಂತ ಆಲಮೇಲ, ಪ್ರಭು ಬಡಿಗೇರ, ರಾಮಣ್ಣ ಬಡಿಗೇರ, ಲಕ್ಷ್ಮೀಕಾಂತ ಪತ್ತಾರ, ನಾರಾಯಣ ಬಡಿಗೇರ, ಎ.ಬಿ.ಪತ್ತಾರ ಇತರರಿದ್ದರು. ಎ.ಬಿ.ಪತ್ತಾರ ಅನ್ನ ಸಂತರ್ಪಣೆ ಸೇವೆ ಸಲ್ಲಿಸಿದರು.