

ಹಿರಿಯೂರು: ವಿಶ್ವಕರ್ಮ ಸಮುದಾಯದವರು ಶ್ರಮ ಜೀವಿಗಳಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ತಾಲೂಕು ಸಮಾಜದ ಅಧ್ಯಕ್ಷ ಸಿ.ನಾರಾಯಣಚಾರ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮ ಸಮುದಾಯ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದ್ದು, ಪರಿಶ್ರಮದ ಜೀವನ ಸಾಗಿಸುತ್ತಿದ್ದಾರೆ.
ಈ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಿದೆ ಎಂದರು. ಉಪನ್ಯಾಸಕ ಎಚ್.ಎನ್.ಪ್ರವೀಣ್ ಕುಮಾರ್ ವಿಶ್ವಕರ್ಮ ವಿಶೇಷ ಉಪನ್ಯಾಸ ನೀಡಿದರು.
ತಹಸೀಲ್ದಾರ್ ರಾಜೇಶ್‌ಕುಮಾರ್, ಎಲ್.ನಾರಾಯಣಾಚಾರ್, ಉಪ ಪ್ರಾಚಾರ್ಯ ಎಲ್.ನಾಗರಾಜಾಚಾರ್, ಪ್ರಸನ್ನ ಕುಮಾರ್, ಸತೀಶ್ ಕುಮಾರ್, ನಗರ ಸಭೆ ಸದಸ್ಯ ಬಾಲಕೃಷ್ಣ, ಹರೀಶ್, ಸುನೀಲ್, ಗೋಪಾಲ್, ಎನ್.ರಾಘವೇಂದ್ರಚಾರ್, ಶಿವಕುಮಾರ್ ಇತರರಿದ್ದರು.
ವಿಶ್ವಕರ್ಮನಿಗೆ ವಿಶ್ವದ ಮೊದಲ ವಾಸ್ತುಶಿಲ್ಪಿ-ಇಂಜಿನಿಯರಿಂಗ್ ಎಂಬ ಬಿರುದು ನೀಡಲಾಗಿದೆ, ಕರಕುಶಲತೆಯ ಕೌಶಲ್ಯದಿಂದ ಜೀವನ ಕಟ್ಟಿಕೊಂಡಿರುವ ಸಮಾಜ, ಸರ್ಕಾರದ ಸೌಲಭ್ಯ ಬಳಸಿಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯಕ್ಕೆ ನೆರವಾಗಬೇಕು.ಎಲ್.ನಾರಾಯಣಾಚಾರ್, ಹಿರಿಯ ಮುಖಂಡ