

ಮದ್ದೂರು : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಸಂಘಟನೆ ವತಿಯಿಂದ ವಿಶ್ವಕರ್ಮರ 8ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಸೆ. 29 ರಂದು ಬೆಳಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಕದಲೂರು ಬಸವರಾಜು ತಿಳಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಕೆ.ಎಂ.ಉದಯ್ ಹಾಗೂ ಸಂಘದ ಅಧ್ಯಕ್ಷ ಕೆ.ಪಿ.ನಂಜುಂಡಿ ಹಾಗೂ ಕಾಳಿಕಾಂಭ ದೇವಾಲಯದ ಟ್ರಸ್ಟ್ ಅಧ್ಯಕ್ಷ ರುದ್ರಾಚಾರ್, ಎನ್.ಎಸ್.ರಾಜು, ದೊಡ್ಡಣ್ಣಚಾರ್, ಜಿಲ್ಲಾಧ್ಯಕ್ಷ ಹೇಮಂತ್, ಯುವಮುಖಂಡ ಎಂ.ಟಿ.ಮಹೇಶ್ ಇತರೆ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಪಿ.ಸಿದ್ದಪ್ಪಾಜಿ, ಮಾಜಿ ಅಧ್ಯಕ್ಷರಾದ ಎಚ್.ಪಿ.ಮಹೇಶ್, ಎಂ.ಸಿ.ಕೃಷ್ಣಚಾರ್, ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಸಿದ್ದರಾಜು, ಸ್ವಾಮಿ, ಶೀಲಾ, ಸುವರ್ಣ, ರವಿಪ್ರಸಾದ್ ಇತರರಿದ್ದರು.