ವಿಶ್ವಕರ್ಮ ಜಯಂತಿ: ಸಿಇಒ ಜತೆ ಚರ್ಚೆ

8adarshkdga5
Published on

ಮಡಿಕೇರಿ: ವಿಶ್ವಕರ್ಮ ಜಯಂತಿಯನ್ನು ಸೆ.೧೭ ರಂದು ಆಚರಿಸುವ ಸಂಬಂಧ ಜಿ.ಪಂ.ಸಿಇಒ ವರ್ಣಿತ್ ನೇಗಿರವರ ಜತೆ ಚರ್ಚೆ ನಡೆಯಿತು.


ನಗರದ ಜಿಲ್ಲಾಧಿಕಾರಿರವರ ಕಚೇರಿ ಸಭಾಂಗಣದಲ್ಲಿ ಸಮಾಜದ ಮುಖಂಡರ ಜತೆ ಚರ್ಚಿಸಿದ ಬಳಿಕ ಜಿ.ಪಂ.ಸಿಇಒ ವರ್ಣಿತ್ ನೇಗಿರವರ ಸಮ್ಮುಖದಲ್ಲಿ ಸಮಾಲೋಚನೆ ನಡೆಯಿತು.


ಜಿಲ್ಲಾ ಮಟ್ಟದ ಕಾರ್ಯಕ್ರಮ ಜಿಲ್ಲಾ ಕೇಂದ್ರದಲ್ಲಿಯೇ ಆಯೋಜಿಸಬೇಕು. ತಾಲೂಕು ಮಟ್ಟದ ಕಾರ್ಯಕ್ರಮ ತಾಲೂಕು ಮಟ್ಟದಲ್ಲಿ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿರವರ ಜತೆ ಚರ್ಚಿಸಿ ತಿಳಿಸಲಾಗುವುದು ಎಂದು ಜಿ.ಪಂ.ಸಿಇಒ ಹೇಳಿದರು.


ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಜೆ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಬಿ.ಬಿ.ನಾಗರಾಜು, ವಿಶ್ವಕರ್ಮ ಸಮಾಜದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಎಸ್.ಬಿ.ಯಶವಂತ್, ಶಿಲ್ಪಿ ಮಂಜುನಾಥ ಆಚಾರ್ಯ, ಬಿ.ಕೆ.ಸುದರ್ಶನ, ಕೆ.ಕೆ.ರಮೇಶ್, ಎನ್.ಪಿ.ರಾಜು, ಜಗದೀಶ್ ಆಚಾರ್ಯ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net