ಮೈಸೂರಿನಲ್ಲಿ ವಿಶ್ವ ಕರ್ಮ ಜಯಂತಿ : ಶಿಲ್ಪಿಗಳಿಗೆ ಸನ್ಮಾನ

Vishwakarma jayanthi
Published on

ಮೈಸೂರು: ವಿಶ್ವವನ್ನು ಸೃಷ್ಟಿಸಿದವರು ವಿಶ್ವಕರ್ಮರು, ವಿಶ್ವಕರ್ಮ ಜಯಂತಿ ಕೇವಲ ವಿಶ್ವಕರ್ಮ ಸಮುದಾಯಕ್ಕೆ ಮಾತ್ರ ಸೀಮಿತ ವಾಗದೆ ಎಲ್ಲರೂ ಆಚರಿಸಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದರು.

ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ದೇವರಾಜ ಮೊಹಲ್ಲ ನಾಗರಿಕ ವೇದಿಕೆ ವತಿಯಿಂದ ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇ ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡ ಶಿಲ್ಪಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮ ಸಮುದಾಯಕ್ಕೆ ಶಿಕ್ಷಣ ಹಾಗೂ ಹೊಸ ತಂತ್ರಜ್ಞಾನದ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಸರ್ಕಾರ ನೆರವು ನೀಡಬೇಕು ಎಂದರು.

ಈ ಸಂದರ್ಭ ಶಿಲ್ಪಿಗಳಾದ ಎಂ.ಎಸ್. ಸೋಮಾಚಾರ್, ಎಸ್.ಎನ್. ಕೇಶವಮೂರ್ತಿ, ಮಂಜಾಚಾರ್, ಸಿದ್ದಪ್ಪ, ರವಿಶಂಕರ್, ಅನಿಲ್ ಕುಮಾರ್, ನಾಗೇಂದ್ರ, ಸತೀಶ್ ಮೂರ್ತಿ, ವಸಂತ್ ಕುಮಾರ್, ಆನಂದ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ವಿಶ್ವಕರ್ಮ ಸಮುದಾಯ ಮುಖಂಡ ರಿಷಿ, ನಗರ ಪಾಲಿಕೆ ಸದಸ್ಯೆ ರಮಣಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net