ಶಿಲ್ಪಿಗಳಿಲ್ಲದ ಜಗತ್ತು ಊಹಿಸಲಾಗದು: ಜಯಪ್ರಕಾಶ ಹೆಗ್ಡೆ

udp-17-vishwakarma
Published on

ಉಡುಪಿ: ಶಿಲ್ಪಿಗಳಿಲ್ಲದೆ ಈ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಾಗದು. ವಿಶ್ವಕರ್ಮ ಸಮುದಾಯದವರು ಒಂದಾಗಬೇಕು. ಸಂಟನೆ ಮೂಲಕ ನಿಮ್ಮ ಬಲ ಏನೆಂಬುದನ್ನು ತೋರ್ಪಡಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಕರೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಉಡುಪಿ ನೇತೃತ್ವದಲ್ಲಿ ವಿಶ್ವಕರ್ಮ ಒಕ್ಕೂಟ ಮತ್ತು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂ ಉಡುಪಿ ಸಹಕಾರದಲ್ಲಿ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯದಲ್ಲಿ 41 ಉಪಜಾತಿಗಳಿವೆ. ಪಟ್ಟಿಯಲ್ಲಿರುವ ಕಮ್ಮಾರ ಸಮುದಾಯದವರು ಅವಿಭಜಿತ ದಣ ಕನ್ನಡ ಜಿಲ್ಲೆ ಹಾಗೂ ಕೊಳ್ಳೇಗಾಲದಲ್ಲಿ ಎಸ್​ಸಿ ಪ್ರಮಾಣಪತ್ರ ಪಡೆಯುತ್ತಾರೆ. ಆದರೆ, ಉಡುಪಿ ಜಿಲ್ಲೆಯಲ್ಲಿರುವ ಕಮ್ಮಾರರು ಎಸ್​ಸಿ ಪ್ರಮಾಣ ಪತ್ರ ಸ್ವೀಕರಿಸುವುದಿಲ್ಲ. ಅದರಂತೆ ಗುಡಿಗಾರ ಸಮುದಾಯದವರಲ್ಲಿ ಎರಡು ಬಣಗಳಿದ್ದು, ಒಂದು ಬಣ ವಿಶ್ವಕರ್ಮ ಸಮುದಾಯಕ್ಕೆ ಸೇರಲು ಬಯಸುತ್ತದೆ. ಇನ್ನೊಂದು ಬಣ ನಿರಾಕರಿಸುತ್ತಿದೆ. ಇದರಿಂದ ಸ್ಪಷ್ಟ ನಿಲುವು ತಾಳಲೂ ಸಹ ಆಯೋಗಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ವಿಶ್ವಕರ್ಮ ಸಮುದಾಯದವರೆಲ್ಲರೂ ಒಂದಾಗಬೇಕಿದೆ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ದೇವಶಿಲ್ಪಿ ವಿಶ್ವಕರ್ಮರು ಶಿಲ್ಪಕಲಾ ಕ್ಷೇತ್ರದ ಮೂಲಪುರುಷರಾಗಿದ್ದಾರೆ. ವಿಶ್ವಕರ್ಮ ಜನಾಂಗದವರು ಕೌಶಲ, ಕುಸುರಿ ಕೆಲಸ ಮಾಡುವವರಾಗಿದ್ದು ಅವರಲ್ಲಿ ಶ್ರದ್ಧೆ, ಆಸಕ್ತಿ ಹಾಗೂ ವೃತ್ತಿ ಗೌರವವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಪಾಡಿಕೊಂಡು ಬರುತ್ತಿದ್ದಾರೆ. ಅದರಂತೆ, ಈ ಸಮುದಾಯದ ಹೆಣ್ಣುಮಕ್ಕಳು ಮುಖ್ಯವಾಹಿನಿಗೆ ಬರುವಂತಾಗಬೇಕು. ಪಾಲಕರು ತಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಪುರಾಣೇತಿಹಾಸದ ಪುಟ ತೆರೆದಾಗ ವಿಶ್ವಕರ್ಮರ ಶ್ರೇಯಸ್ಸು ಏನೆಂಬುದು ತಿಳಿಯುತ್ತದೆ. ಜಗದಲ್ಲಿ ಹಲವಾರು ದೇಗುಲಗಳನ್ನು ನಿರ್ಮಿಸಿದ ಖ್ಯಾತಿ ಅವರದ್ದು. ಮೀನುಗಾರಿಕೆ ಕರಾವಳಿ ಭಾಗದ ಬಹುದೊಡ್ಡ ಆರ್ಥಿಕ ವಹಿವಾಟಿನ ಕ್ಷೇತ್ರ. ಆದರೆ, ಮೀನುಗಾರಿಕೆಯ ಮೂಲವಾದ ಬೋಟ್​ ತಯಾರಿಸುವವರು ಇದೇ ವಿಶ್ವಕರ್ಮ ಸಮುದಾಯದವರು. ಹೀಗಾಗಿ ಎಲ್ಲ ಶ್ರೇಯಸ್ಸಿನ ಮೂಲ ಇದೇ ಜನಾಂಗದವರಾಗಿದ್ದಾರೆ ಎಂದು ಶ್ಲಾಘಿಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯರನ್ನು ಪರಿಚಯಿಸಿ ಗೌರವಿಸಲಾಯಿತು. ಕಬ್ಬಿಣದ ಶಿಲ್ಪಿ&ಬಾಲಕಟ್ಟ ಕೃಷ್ಣಯ್ಯ ಆಚಾರ್ಯ, ಕಾಷ್ಠ ಶಿಲ್ಪಿ& ರೆಂಜಾಳ ಸೀತಾರಾಮ ಆಚಾರ್ಯ, ಕಂಚು ಶಿಲ್ಪಿ&ಬಿಳಿಯಾರು ವಿಠ್ಠಲ ಆಚಾರ್ಯ, ಶಿಲಾ ಶಿಲ್ಪಿ& ರಾಮಕೃಷ್ಣ ಆಚಾರ್ಯ ಹಾಗೂ ಸುವರ್ಣ ಶಿಲ್ಪಿ&ಕೃಷ್ಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಚಂದ್ರಕಾಂತ ಪುರೋಹಿತ್​ ಉಪನ್ಯಾಸ ನೀಡಿದರು. ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂದ ಅಧ್ಯಕ್ಷ ಕೆ. ವೆಂಕಟೇಶ ಆಚಾರ್ಯ, ದ.ಕ. ಮತ್ತು ಉಡುಪಿ ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಸಂಟನೆ ಕಾರ್ಯದರ್ಶಿ ಹರೀಶ್​ ಆಚಾರ್ಯ, ಕೋಶಾಧಿಕಾರಿ ದಿವಾಕರ ಆಚಾರ್ಯ ಹಾಗೂ ಸಮುದಾಯದ ಮಹಿಳೆಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಆರಂಭದಲ್ಲಿ ಶ್ರೀನಿಧಿ ನಾಡಗೀತೆ ಹಾಡಿದರು. ಬಿ.ಎ. ಆಚಾರ್ಯ ಮಣಿಪಾಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net