ವಿಶ್ವಕರ್ಮರು ಎಲ್ಲ ವರ್ಗಗಳ ಮಿತ್ರರು

Oplus_131072
ಯಳಂದೂರು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
Published on

ಯಳಂದೂರು: ವಿಶ್ವಕರ್ಮರು ಎಲ್ಲ ಜನಾಂಗಗಳ ಮಿತ್ರರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದದಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಕರ್ಮ ಜನಾಂಗವನ್ನು ಗುರುತಿಸಿ ಇವರಿಗೆ ಸಂವಿಧಾನದಡಿ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ನಮ್ಮ ಸರ್ಕಾರ ನೀಡಿದೆ. ನಮ್ಮ ರಾಜ್ಯವೂ ಸೇರಿದಂತೆ ಇಡೀ ದೇಶದ ದೇಗುಲಗಳಲ್ಲಿ ಕಲೆಯ ಅದ್ಭುತ ನಿದರ್ಶನಗಳನ್ನು ನೀಡಿ, ಜಗದ್ವಿಖ್ಯಾತಗೊಳಿಸಿದ ಸಮುದಾಯ ಇದಾಗಿದೆ. ಇವರ ಕಲೆಗೆ ಯಳಂದೂರು ಪಟ್ಟಣದಲ್ಲಿರುವ ಬಳೇಮಂಟಪದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟ ಕಲ್ಲಿನ ಬಳೆಗಳ ಸರಪಳಿ ಒಂದು ಉತ್ತಮ ನಿದರ್ಶನವಾಗಿದೆ. ಈ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಇನ್ನಷ್ಟು ಬಲಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಪಿ.ಗೋವಿಂದರಾಜು ಮಾತನಾಡಿ, ವೇದಗಳಿಂದಲೂ ವಿಶ್ವಕರ್ಮ ಜನಾಂಗ ತಮ್ಮ ಕುಲಕಸುಬಿಗೆ ಪ್ರಸಿದ್ಧಿಯನ್ನು ಪಡೆದಿದೆ. ಪುರಾಣದಲ್ಲಿ ಕಂಡು ಬರುವ ನಮ್ಮ ಮೂಲ ಪುರುಷರು ಜಗತ್ತಿಗೆ ಒಂದು ಹೊಸ ರೂಪವನ್ನು ಕೊಟ್ಟರು ಎಂಬ ಪ್ರತೀತಿ ಇದೆ. ಪುಷ್ಪಕ ವಿಮಾನವನ್ನು ತಯಾರಿಸಿದವರೂ ಕೂಡ ವಿಶ್ವಕರ್ಮರೇ ಆಗಿದ್ದು, ಈ ಸಮುದಾಯಕ್ಕೆ ಲಕ್ಷಾಂತರ ವರ್ಷಗಳ ಐತಿಹ್ಯ ಇದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ವೃತ್ತಿಯಲ್ಲಿ ಇನ್ನಷ್ಟು ಕೌಶಲ ಸಾಧಿಸಬೇಕು. ಇದಕ್ಕೆ ಶಿಕ್ಷಣದ ಒತ್ತು ನೀಡಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ್, ರವಿ, ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ತಹಸೀಲ್ದಾರ್ ಎಸ್.ಎಲ್.ನಯನಾ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ರಾಜಸ್ವ ನಿರೀಕ್ಷಕ ಯದುಗಿರಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಎನ್. ನಾಗರಾಜು, ಮಹದೇವ, ಕಿರಣ್, ಕೃಷ್ಣ, ಹರೀಶ್, ಸೋಮಣ್ಣ, ನಾಗರಾಜು, ಗಿರೀಶ್, ಪ್ರಸಾದ್, ರಾಚಾಚಾರಿ, ಮುತ್ತುರಾಜ್, ಭಾಗ್ಯಮ್ಮ, ಕೆಂಪ, ನಾಗಣ್ಣ, ಮಹೇಶ್, ಅನಿಲ್ ರಾಜೇಶ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net