

ಪುತ್ತೂರು: ಶ್ರೀ ವಿಶ್ವಕರ್ಮ ಸಮಾಜ ಸಭಾ ಬೀರಮಲೆ ಪುತ್ತೂರು ಆಶ್ರಯದಲ್ಲಿ ೬೨ನೇ ವರ್ಷದ ಶ್ರೀ ವಿಶ್ವಕರ್ಮ ಹೋಮ ಹಾಗೂ ಪೂಜಾ ಮಹೋತ್ಸವ ಪುತ್ತೂರು ಬೀರಮಲೆ ಶ್ರೀ ವಿಶ್ವಕರ್ಮ ಮಂದಿರದಲ್ಲಿ ನೆಟ್ಟಣಿಗೆ ಮಾಧವ ಶರ್ಮರ ಆಚಾರ್ಯತ್ವದಲ್ಲಿ ನಡೆಯಿತು.
ವಿಶ್ವಕರ್ಮ ಯುವಕ ಮಂಡಲದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುoಜಿ ಪರೀಕ್ಷೇಯಲ್ಲಿ ಅಽಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮಾಜ ಸಭಾ ವತಿಯಿಂದ ಗೌರವಿಸಲಾಯಿತು. ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಪಾಲ್ಗೊಂಡಿದ್ದರು.
ಶ್ರೀ ವಿಶ್ವಕರ್ಮ ಸಮಾಜ ಸಭಾದ ಗೌರವಾಧ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ ಕಮ್ಮಾಯಿ, ಅಧ್ಯಕ್ಷ ಗಂಗಾಧರ ಆಚಾರ್ಯ ಆಡ್ವಾಯಿ, ಉಪಾಧ್ಯಕ್ಷ ಕೆ. ಮುರಳೀಧರ ಆಚಾರ್ಯ ಗುಡ್ಡಮನೆ, ಎಂ. ಆರ್. ಹರೀಶ್ ಆಚಾರ್ಯ ಬೀರಮಲೆ, ಕೋಶಾಽಕಾರಿ ಕೆ. ನಿರಂಜನ ಆಚಾರ್ಯ ಮರೀಲು, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ಆಚಾರ್ಯ ಬನ್ನೂರು, ಜೊತೆಕಾರ್ಯದರ್ಶಿ ಕೆ. ಜಯಪ್ರಕಾಶ್ ಆಚಾರ್ಯ ನೆಲ್ಲಿಕಟ್ಟೆ, ಶ್ರೀ ಗಾಯತ್ರಿ ಮಹಿಳಾ ಮಂಡಳಿ, ವಿಶ್ವಕರ್ಮ ಯುವಕ ಮಂಡಲದ ಪದಾಽಕಾರಿಗಳು ಹಾಜರಿದ್ದರು.