ಗ್ರಾಮ ಮಟ್ಟದಿಂದ ವಿಶ್ವಕರ್ಮ ಸಮುದಾಯ ಸಂಘಟನೆ

ಬನ್ನೂರಿನ ಕಾಳಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆ.ಪಿ.ನಂಜುಂಡಿ ಮಾತನಾಡಿದರು. ರಿಷಿ, ನಾಗರಾಜಾಚಾರಿ, ಶಿವಣ್ಣ, ಶಿವಮೂರ್ತಿ ಇದ್ದರು.
ಬನ್ನೂರಿನ ಕಾಳಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆ.ಪಿ.ನಂಜುಂಡಿ ಮಾತನಾಡಿದರು. ರಿಷಿ, ನಾಗರಾಜಾಚಾರಿ, ಶಿವಣ್ಣ, ಶಿವಮೂರ್ತಿ ಇದ್ದರು.
Published on

ಬನ್ನೂರು: ಗ್ರಾಮ ಮಟ್ಟದಿಂದಲೇ ವಿಶ್ವಕರ್ಮ ಸಮುದಾಯವನ್ನು ಸಂಘಟಿಸಿ ನಾಯಕನನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಈಡೇರಿಸಿಯೇ ತೀರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ತಿಳಿಸಿದರು.

ಪಟ್ಟಣದ ಕಾಳಮ್ಮ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಸಮುದಾಯದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಸಂಘಟನೆ ಕೊರತೆಯಿಂದ ವಿಶ್ವಕರ್ಮ ಜನಾಂಗ ಬಳಲುತ್ತಿದ್ದು, ಈ ಹಿಂದೆ ರೂಪಿಸಿದ್ದ ಸಂಘಟನೆಯ ಶಕ್ತಿ ಕುಂದಿದೆ. ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಮತ್ತೊಮ್ಮೆ ಆ ಇತಿಹಾಸ ಮರುಕಳಿಸಬೇಕಾಗಿದೆ ಎಂದರು.

ಹೋರಾಟದ ಫಲವಾಗಿ ವಿಶ್ವಕರ್ಮ ಜಯಂತಿ ಆಚರಣೆ ಜಾರಿಗೆ ಬಂತು. ಇದನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವಂತೆ ಮಾಡಬೇಕಾಗಿದ್ದು, ಇದರ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿ ಜಿಲ್ಲೆಯಲ್ಲೂ ಸಂಘಟನೆ ಅವಶ್ಯವಿದ್ದು, ಸರ್ಕಾರದ ವತಿಯಿಂದ 2 ಎಕರೆ ಜಮೀನನ್ನು ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಸಂಘಟನೆಯಿಂದ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಲಿದೆ. ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯದೊಂದಿಗೆ ಉದ್ಯೋಗಾವಕಾಶ, ಸರ್ಕಾರಿ ಸೌಲಭ್ಯಗಳು ಜನರಿಗೆ ತಲುಪಲಿದ್ದು, ವಿಶ್ವಕರ್ಮ ಜನಾಂಗ ಮೊದಲು ಸಂಘಟಿತರಾಗುವ ಅವಶ್ಯಕತೆ ಇದೆ ಎಂದ ಅವರು, ಮುಂದಿನ ದಿನಗಳಲ್ಲಿ ವಿಶ್ವಕರ್ಮ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ವಿಶ್ವಕರ್ಮ ಮುಖಂಡ ರಿಷಿ, ಮೊಗಣ್ಣಚಾರ್, ಪುರಸಭೆ ಸದಸ್ಯ ಶಿವಣ್ಣ, ವಕೀಲ ಶಿವಮೂರ್ತಿ, ನಾಮ ನಿರ್ದೇಶಿತ ಸದಸ್ಯ ನಾಗರಾಜಾಚಾರ್, ಚೆಲುವರಾಜು, ಮಹದೇವ, ನರಸಿಂಹಾಚಾರ್, ಸುದರ್ಶನ್, ನಾಗರಾಜು, ಸಿದ್ದರಾಜು, ಬಸವರಾಜು, ಸುಧಾಕರ್, ಸೋಮಣ್ಣ, ಮಂಜು, ಕುಮಾರ್, ಚಂದ್ರು, ಸಿದ್ದಪ್ಪಾಜಿ, ಪುಟ್ಟಸ್ವಾಮಿ ಆಚಾರ್, ಪ್ರಭಾಕರ್, ರಮೇಶ್, ಶಿಲ್ಪಿರಮೇಶ್, ಮಂಜು, ಸಿದ್ದರಾಜು, ನಾಗೇಂದ್ರ, ಭಾಗ್ಯಮ್ಮ ಇತರರಿದ್ದರು.

ಬನ್ನೂರಿನ ಕರಿಯಪ್ಪ ದೇವರಿಗೆ ಬಹಳಷ್ಟು ಇತಿಹಾಸವಿದೆ. ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಇಲ್ಲಿನ ದೇವಾಲಯದಲ್ಲಿ ಅವರ ಭಾವಚಿತ್ರವಾಗಲೀ ಅಥವಾ ಪ್ರತಿಮೆಯಾಗಲಿ ಇಲ್ಲ. ರೇಖಾಚಿತ್ರ ಬಿಡಿಸುವ ಚಿತ್ರಗಾರರಿಂದ ಅವರ ಇತಿಹಾಸ ಆಧರಿಸಿ ಭಾವಚಿತ್ರ ಬರೆಸುವುದರ ಜತೆಗೆ ಅವರ ಪ್ರತಿಮೆಯನ್ನು ರೂಪಿಸಲಾಗುವುದು.

ಕೆ.ಪಿ.ನಂಜುಂಡಿ ವಿಧಾನ ಪರಿಷತ್ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net