ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

18GDG05
Published on

ಗದಗ:
ಪ್ರತಿಭಾ ಪುರಸ್ಕಾರವು ಸಮಾಜದ ವಿದ್ಯಾಥಿರ್ಗಳಿಗೆ ಸ್ಪೂತಿರ್ ತುಂಬುವುದರೊಂದಿಗೆ, ಸಮಾಜದ ಶೈಣಿಕ ಪ್ರಗತಿಗೆ ಕಾರಣವಾಗಿ, ಮಕ್ಕಳಲ್ಲಿ ಸಮಾಜ ಸಂಟನೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತದೆ ಎಂದು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ೇಮಾಭಿವೃದ್ಧಿ ಸಂದ ಅಧ್ಯ ರಾಜಗೋಪಾಲ ಕಡ್ಲಿಕೊಪ್ಪ ಹೇಳಿದರು.
ನಗರದ ವಿಶ್ವಕರ್ಮ ನೌಕರರ ೇಮಾಭಿವೃದ್ಧಿ ಸಂದ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ವಿಶ್ವಕರ್ಮ ಸಮಾಜದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಸಾಧಕ ವಿದ್ಯಾಥಿರ್ಗಳ ಪ್ರತಿಭಾ ಪುರಸ್ಕಾರ, ವಿಶ್ವಕರ್ಮ ನೌಕರಶ್ರೀ ಪ್ರಶಸ್ತಿ ಪ್ರದಾನ, ಸಂದ ನಿವೃತ್ತ ನೌಕರ ಸದಸ್ಯರಿಗೆ ಸನ್ಮಾನ ಹಾಗೂ ವಿಶ್ವಕರ್ಮ ಸಮುದಾಯ ಭವನ ಮತ್ತು ವಸತಿ ನಿಲಯ ಕಟ್ಟಡಗಳಿಗೆ ದೇಣಿಗೆ ನೀಡಿದ ದಾನಿಗಳ ೋಟೋ ಅನಾವರಣ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯತೆವಹಿಸಿ ಮಾತನಾಡಿದರು.
2022&23ನೇ ಸಾಲಿನ ಎಸ್​ಎಸ್​ಎಲ್​ಸಿ ವಾರ್ಷಕ ಪರೀೆಯಲ್ಲಿ ಶೇ.75 ಹಾಗೂ ಪಿಯುಸಿ ವಾರ್ಷಕ ಪರೀೆಯಲ್ಲಿ ಶೇ.70 ರಷ್ಟು ಅಂಕಗಳನ್ನು ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು. ಮೆ. 25ರಂದು ನಗರದ ಡಾ. ಬಿ. ಆರ್​. ಅಂಬೇಡ್ಕರ ಭವನದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎ. ಎನ್​ ಬಡಿಗೇರ, ಬಿ. ಎಂ. ಯರಕೆದ, ಬಿ. ಎಂ. ಬಡಿಗೇರ, ಪ್ರೊ. ಕೆ. ಎಸ್​. ಬಡಿಗೇರ, ಎಂ. ಎಂ. ಸುತಾರ, ಎಸ್​. ಎಂ. ಕದಡಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net