ರಾಯಚೋಟಿಯಲ್ಲಿ ಪುಸ್ತಕ ಲೋಕಾರ್ಪಣೆ ನಾಳೆ

veerabhadra
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶ್ರೀ ವೀರಭದ್ರ ದೇವರ ಜಯಂತಿ ಮಹೋತ್ಸವ ನಿಮಿತ್ತ ಆಂಧ್ರಪ್ರದೇಶದ ರಾಯಚೋಟಿಯ ಶ್ರೀ ವೀರಭದ್ರದೇವರ ದೇವಾಲಯದಲ್ಲಿ ಸೆ.3ರಂದು ಆಯೋಜಿಸಿರುವ ವಿಶೇಷ ಸಮಾರಂಭದಲ್ಲಿ ಡಾ. ಜ.ಚ.ನಿ. ಅವರು ಬರೆದಿರುವ ವಿಶ್ವಜ್ಯೋತಿ ವೀರಭದ್ರ ಪುಸ್ತಕ ಲೋಕಾರ್ಪಣೆ ನಡೆಯಲಿದೆ.

ಅಂದು ಬೆಳಗ್ಗೆ ರಾಯಚೋಟಿಯ ಶ್ರೀ ವೀರಭದ್ರ ದೇವರಿಗೆ ಏಕಾದಶ ಮಹಾರುದ್ರಾಭಿಷೇಕ, ಶಿವಾಷ್ಟೋತ್ತರ, ವಿಶೇಷ ಅಲಂಕಾರ, ಮಹಾಮಂಗಳಾರತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ನಡೆಯುವ ಜಯಂತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ರಾಯಚೋಟಿ ಕ್ಷೇತ್ರದ ಶ್ರೀ ವೀರಭದ್ರ ದೇವರ ತೇರು ಬಳಗದ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ ಇತರರು ಪಾಲ್ಗೊಳ್ಳುವರು.

ನವನಗರದಲ್ಲಿ: ನವನಗರದ ವೀರಶೈವ ಸಮಾಜ ಸೇವಾ ಸಂಘಟನಾ ಸಮಿತಿ ಹಾಗೂ ಶ್ರೀ ವೀರಭದ್ರೇಶ್ವರ ಸೇವಾ ಬಳಗದ ಜಂಟಿ ಆಶ್ರಯದಲ್ಲಿ ಸೆ.3 ರಂದು ಸಂಜೆ 4 ಗಂಟೆಗೆ ನವನಗರದ ಶ್ರೀ ವೀರಭದ್ರ ದೇವರ ದೇವಾಲಯದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಮಂಗಳವಾರ ಪ್ರಾತಃಕಾಲದಲ್ಲಿ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆಯ ವಿಶೇಷ ಪೂಜೆ ನಡೆಯಲಿದೆ. ಸಂಜೆ ಉಡಿತುಂಬುವ ಹಾಗೂ ತೊಟ್ಟಿಲೋತ್ಸವ ಜರುಗಲಿವೆ ಎಂದು ಅಧ್ಯಕ್ಷ ಅನಿಲಕುಮಾರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net