ವಿಶ್ವಗುರು ಭಾರತ ನಿರ್ಮಾಣ: ಬಿ.ವೈ.ರಾಘವೇಂದ್ರ

bjp programme
ಶಿವಮೊಗ್ಗ ಬಿಬಿ ರಸ್ತೆಯ ಸತ್ಯ ಪ್ರಮೋದ ಕಲ್ಯಾಣ ಮಂದಿರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶ್ರೀವಾತ್ಸವ್, ಎಸ್.ದತ್ತಾತ್ರಿ, ಸುಂದರರಾಜ್, ರಾಘವೇಂದ್ರ ಉಡುಪ ಇದ್ದರು.
Published on

ಶಿವಮೊಗ್ಗ: ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಮತ್ತಷ್ಟು ಎತ್ತರಕ್ಕೆ ಹಾರಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ನಗರದ ಬಿಬಿ ರಸ್ತೆಯ ಸತ್ಯಪ್ರಮೋದ ಕಲ್ಯಾಣ ಮಂದಿರದಲ್ಲಿ ಗುರುವಾರ ಬ್ರಾಹ್ಮಣ ಸಮಾಜದ ವಿಶೇಷ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ವಿಶ್ವಗುರು ಭಾರತವನ್ನು ನಿರ್ಮಾಣ ಮಾಡಲು ಹೆಚ್ಚಿನ ಬೆಂಬಲದ ಅವಶ್ಯವಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರೈಲ್ವೆ, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ, ಜೋಗ ಮತ್ತು ಕೊಡಚಾದ್ರಿಯಲ್ಲಿ ಕೇಬಲ್ ಕಾರ್ ಅಳವಡಿಕೆ ಹೀಗೆ ನೂರಾರು ಕಾರ್ಯಕ್ರಮಗಳು ಜನಸಾಮಾನ್ಯರಿಗಾಗಿ ಮಾಡಿದ್ದೇನೆ. ಇನ್ನೂ ಅನೇಕ ಯೋಜನೆಗಳು ನನ್ನ ಕಣ್ಣುಮುಂದೆ ಇವೆ. ಅವುಗಳ ಅನುಷ್ಠಾನಕ್ಕೆ ಮತ್ತೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಶಾಸಕ ಶ್ರೀವತ್ಸ, ಮಾಜಿ ಶಾಸಕ ಕೆ.ಬಿಪ್ರಸನ್ನಕುಮಾರ್, ಮುಖಂಡರಾದ ಎಸ್.ದತ್ತಾತ್ರಿ, ನೆ.ಲ.ನರೇಂದ್ರ ಬಾಬು, ಸುಂದರರಾಜ್, ರಾಘವೇಂದ್ರ ಉಡುಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net