ಕಲ್ಯಾಣ ಕ್ರಾಂತಿ ಹುಟ್ಟು ಹಾಕಿದ ವಿಶ್ವಗುರು ಬಸವಣ್ಣ

10hbd4
ಹುಮನಾಬಾದ್‌ನ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವೇಶ್ವರ ಮೂರ್ತಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾಲಾರ್ಪಣೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಪ್ರಮುಖರಾದ ಅಭಿಷೇಕ ಪಾಟೀಲ್, ಲಕ್ಷ್ಮಣರಾವ ಬುಳ್ಳಾ ಇತರರಿದ್ದರು.
Published on

ಹುಮನಾಬಾದ್: ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ಸಮಾಜದಲ್ಲಿ ಸಮಾನತೆ ಮೂಡಿಸಲು ಕಲ್ಯಾಣ ಕ್ರಾಂತಿ ಹುಟ್ಟು ಹಾಕಿದರು. ಅವರ ತತ್ವಾದರ್ಶಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವ ಜಯಂತಿ ಅಂಗವಾಗಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರು ಸೇರಿ ಶರಣರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಹೇಳಿದರು.

ವಿಶ್ವಗುರು ಬಸವಣ್ಣನವರ ಹಾಗೂ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ನಿಮಿತ್ತ ತಮ್ಮ ಗೃಹ ಕಚೇರಿಯಲ್ಲಿ ರಾಜಶೇಖರ ಪಾಟೀಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಮಲ್ಲಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಪ್ರಮುಖರಾದ ಅಫ್ಸರಮಿಯ್ಯಾ, ಓಂಕಾರ ತುಂಬಾ, ಲಕ್ಷ್ಮಣರಾವ ಬುಳ್ಳಾ, ಬಾಬು ಟೈಗರ, ದತ್ತುಕುಮಾರ ಚಿದ್ರಿ, ಬಾಬುರಾವ ಪರಮಶೆಟ್ಟಿ, ಮಹೇಶ ಆಗಡಿ, ಉಮೇಶ ಜಮಗಿ, ರಾಹೀಲ್ ಬಿಲ್ಲಿ, ಸುರೇಶ ಘಾಂಗ್ರೆ, ಸಿದ್ರಾಮ ವಾಘಮಾರೆ, ಮುಕ್ರಮ್, ಗುಂಡಪ್ಪ, ನರಸಪ್ಪ ಪರಸನೋರ, ಅಣ್ಣರಾವ ಪಾಟೀಲ್, ಸಚಿನ ಮಠಪತಿ, ಧರ್ಮರೆಡ್ಡಿ, ಅಶೋಕ ಸೋಂಡೆ, ಮಲ್ಲಿಕಾರ್ಜುನ ಶರ್ಮಾ, ಅಮರ, ದತ್ತು, ಶ್ರೀಧರ, ಯಾಸಿನ್, ಜಾಫರ್, ಅಶೋಕ್ ಕಟ್ಟಿ, ಅಶೋಕ ಹತ್ತಿ, ಲಕ್ಷö್ಮಣ ಶಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net