

ಮಂಡ್ಯ: ವಿಶ್ವಜ್ಞಾನಿ ಸೇವಾ ಟ್ರಸ್ಟ್, ಸಾರಿಗೆ ನೌಕರರ ಸಂಘಟನೆಗಳ ವತಿಯಿಂದ ನ.7 ಮತ್ತು 8ರಂದು ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವಜ್ಞಾನಿ ಸಾರಿಗೆ ಕಪ್-2024 ಹೆಸರಿನಲ್ಲಿ ರಾಜ್ಯಮಟ್ಟದ ಸಾರಿಗೆ ನೌಕರರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಟ್ರಸ್ಟ್‌ನ ಗೌರವಾಧ್ಯಕ್ಷ ತಾಳಶಾಸನ ಮೋಹನ್ ತಿಳಿಸಿದರು.
ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್‌ಲಾಡ್ ಉದ್ಘಾಟಿಸುವರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಾದ್ಯಂತ ಎಲ್ಲ ಸಾರಿಗೆ ವಿಭಾಗಗಳಿಂದ 25 ತಂಡ ಆಗಮಿಸುತ್ತಿದ್ದು, 400 ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಟೂರ್ನಿ ಆಯೋಜನೆಗೆ 25 ಲಕ್ಷ ರೂ.ಗೂ ಹೆಚ್ಚು ವೆಚ್ಚವಾಗುತ್ತಿದ್ದು, ಸಾರಿಗೆ ಇಲಾಖೆ ನೌಕರರು ಈ ವೆಚ್ಚವನ್ನು ಭರಿಸಲಿದ್ದಾರೆ ಎಂದರು.
ಟ್ರಸ್ಟ್ ನಿರ್ದೇಶಕರಾದ ನಂಜುಂಡ ಮೌರ್ಯ, ಕೃಷ್ಣ, ಡಿ.ಪಿ.ಮಹೇಂದ್ರ, ಜಿ.ರವಿ, ಎಚ್.ಎಂ.ರಾಘವೇಂದ್ರ ಇದ್ದರು.