

ಬೆಂಗಳೂರು:ವಿಶ್ವ ಒಕ್ಕಲಿಗರ ಮಠ ಹಾಗೂ ಆದಿಚುಂಚನಗಿರಿ ಮಠ ಎರಡು ಒಂದೇ.ನಾಥ ಪರಂಪರೆ ಮೂಲಕ ನಾವೆಲ್ಲರೂ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಕೆಂಗೇರಿ ರಸ್ತೆಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ನೂತನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು. ಈ ಮಠಕ್ಕೆ ಆದಿಚುಂಚನಗಿರಿ ಮಠದ ಸಹಕಾರ ಹಿಂದೆಯೂ ಇದೆ. ಈಗಲೂ ಇರುತ್ತದೆ. ನೂತನ ಗುರುಗಳು ನಮ್ಮ ಮಠದಲ್ಲಿ ಬೆಳೆದಿದ್ದವರು. ಅವರಿಗೆ ಸದಾ ಪ್ರೋತ್ಸಾಹ ಇರಲಿದೆ. ಗುರು,ಪರಂಪರೆ ಮತ್ತು ಸಂಪ್ರದಾಯ ಒಂದೇ ಇರುವುದರಿಂದ ಮೂರನೇ ವ್ಯಕ್ತಿ ಬರಲ್ಲ.1974ರಿಂದ ಹಿರಿಯ ಶ್ರೀಗಳು ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಮಠ ನಡೆಯುತ್ತಿದೆ. ಇದು ಹಳೆಯ ಮಠವಾಗಿದೆ. ನೂತನ ಉತ್ತರಾಧಿಕಾರಿಯಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮಠವನ್ನು ಇನ್ನಷ್ಟು ಬೆಳೆಸಲು ಸಂಕಲ್ಪ ತೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ.ನಮ್ಮ ಬಗ್ಗೆ ಏನೇ ಟೀಕೆ ಬಂದರೂ ತಲೆಕೆಡಿಸಿಕೊಳ್ಳದೆ ಸಮಾಜವನ್ನು ತಿದ್ದುವ ಕೆಲಸದಲ್ಲಿ ಸಾಗುವಂತಾಗಬೇಕೆಂದು ಶ್ರೀಗಳು ಸಲಹೆ ನೀಡಿದರು.
ಆಧ್ಯಾತ್ಮಿಕ ಪರಂಪರೆಯಲ್ಲಿ ಮುನ್ನಡೆಯಲು ಶ್ರೇಷ್ಠ ಗುರುನಿಂದ ಪಡೆದ ಜ್ಞಾನವನ್ನು ಶಿಷ್ಯಂದಿರು ಸಮಾಜಕ್ಕೆ ಹಂಚುವಂತಾಗಬೇಕು. ಸನ್ಯಾಸಿಗಳ ಬಗ್ಗೆ ಈ ಸಮಾಜ ಸ್ಮೂವಾಗಿ ಗಮನಿಸುತ್ತದೆ. ಬದಲಾದ ಕಾಲಟ್ಟದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಮ್ಮ ಮಠ ಈ ಮಠದ ಜತೆ ಸದಾ ಜೊತೆಯಲ್ಲಿ ಇರಲಿದೆ ಎಂದು ಶ್ರೀಗಳು ಭರವಸೆ ನೀಡಿದರು. ನೂತನ ಸ್ವಾಮೀಜಿಗೆ ರುದ್ರಾಕ್ಷಿ ಮುಕುಟಧಾರಣೆ ನೆರವೇರಿಸಲಾಯಿತು. ಆರೋಹಣ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಇದಕ್ಕೂ ಮುನ್ನ ಗಂಗೆಪೂಜೆ, ಶಿವಪಾರ್ವತಿಯರ, ಗಣಪತಿ ಪೂಜೆ ನೆರವೇರಿತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಸ್ಫಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ. ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಸೇರಿ ರಾಜ್ಯದ 50ಕ್ಕೂ ಅಧಿಕ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಪಟ್ಟಾಧಿಕಾರ ಮಹೋತ್ಸವ ಚಾರಿತ್ರಿಕ
ಸಿದ್ದಗಂಗಾಮಠ, ಬೇಲಿ ಮಠ ಸೇರಿ ರಾಜ್ಯದ 50ಕ್ಕೂ ಅಧಿಕ ಮಠದ ಶ್ರೀಗಳು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ನೂತನ ಉತ್ತಾಧಿಕಾರಿಯಾಗಿ ನೆರವೇರಿಸಿರುವುದು ಚಾರಿತ್ರಿಕವಾದದ್ದು. ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಮೌನ ತಪಸ್ವಿ. ಹಿರಿಯ ಗುರುಗಳ ಸೇವೆಯನ್ನು ಈ ಸಮಾಜ ಬಳಸಿಕೊಂಡಿದೆ ಎಂದು ಶ್ರೀ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ. 4 ದಶಕಗಳ ಕಾಲ ನಿಷ್ಠೆಯಿಂದ ಸೇವೆ ಮಾಡಿದ್ದು, ಸಮಾಜಕ್ಕೆ ಶಕ್ತಿ ತುಂಬವ ಕಾರ್ಯ ಮಾಡಿದ್ದಾರೆ. ಇದೀಗ ಹಿರಿಯ ಶ್ರೀಗಳು ಕಿರಿಯ ಶ್ರೀಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಕೆಎಎಸ್ ಅಧಿಕಾರಿ ಡಾ.ಎಚ್.ಎಲ್ ನಾಗರಾಜು ಅವರನ್ನು ಆಯ್ಕೆ ಮಾಡಿದ್ದು ಗಮನಾರ್ಹ. ಅಧಿಕಾರ ವರ್ಗದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ವಿರಾತಿ ವಿರಾಳ. ಇಂತಹ ಸಂದರ್ಭದಲ್ಲಿ ನಾಗರಾಜು ಸನ್ಯಾಸತ್ವ ಸ್ವೀಕರಿಸಿ ಗುರು ಸ್ಥಾನ ಪಡೆದಿರುವುದು ವಿಶೇಷವಾದದ್ದು. ಪ್ರಾಮಾಣಿಕ, ಬದ್ಧತೆಯಿಂದ ಕಿರಿಯ ಶ್ರೀಗಳು ಮಠವನ್ನು ಇನ್ನಷ್ಟು ಬೆಳೆಸುವಂತಾಗಬೇಕು ಎಂದರು.
ಕೆಎಎಸ್ ಅಧಿಕಾರಿ ನಾಗರಾಜು, ಅಧಿಕಾರ ಬಿಟ್ಟು ಸಮಾಜ ಸೇವೆಗೆ ತಮ್ಮನ್ನು ತಾವು ಸಮರ್ಪಿಸುವ ನಿಟ್ಟಿನಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿರುವುದು ಒಳ್ಳೆಯ ಬೆಳವಣಿಗೆ. ಇದು ಅವರ ಕುಟುಂಬಕ್ಕೆ ನೋವಾದರೂ ಸಮಾಜ ಇದನ್ನು ಆನಂದಿಸಲಿದೆ. ಸಮಾಜದಲ್ಲಿರುವ ಹಲವು ಕುಂದು ಕೊರತೆ ನಿವಾಸಿರಲು ಗುರು ಸ್ಥಾನದಲ್ಲಿ ಕುಳಿತಿರುವ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಒಳ್ಳೆಯ ಕಾರ್ಯ ಮಾಡುವಂತಾಗಲಿ.
| ಶ್ರೀ ಬಸವಲಿಂಗ ಪಟ್ಟದ್ದೇವರು. ಹಿರೇಮಠ ಸಂಸ್ಥಾನ.
ಒಕ್ಕಲಿಗ ಸಮಾಜ ಪ್ರಪಂಚಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಇದರಲ್ಲಿ ನಾಥ ಪರಂಪರೆ ಕೊಡುಗೆ ಸಾಕಷ್ಟಿದೆ. ಗಾಯತ್ರಿ ಮಂತ್ರ ಕೊಟ್ಟ ಸಮುದಾಯ ಇದಾಗಿದೆ. ನಾನೊಬ್ಬ ಅಧಿಕಾರಿ ಎಂಬ ಅಹಂಕಾರ ನಾಗರಾಜುಗೆ ಇರಲಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿಯಾಗಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆಗಿದ್ದಾರೆ. ಕಿರಿಯ ಶ್ರೀಗಳು ನಿಸ್ವಾರ್ಥವಾಗಿ ಸಮಾಜಕ್ಕೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುವಂತಾಗಲಿ.
| ಅವಧೂತ ಶ್ರೀ ವಿನಯ್ ಗುರೂಜಿ.