

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ ಶಿರ್ತಾಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕ ಆಶ್ರಯದಲ್ಲಿ ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ವಿಶ್ವ ಶಾಂತಿ ಯಾಗ ಸಂಪನ್ನಗೊಂಡಿತು.
ಕೇರಳ ಶಿವಗಿರಿ ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಶ್ರೀ ನಾರಾಯಣಗುರುಗಳು ಪ್ರತ್ಯಕ್ಷ ದೇವರು. ಹಿಂದುಳಿದ ವರ್ಗದವರಿಗಾಗಿ ಆರಾಧನಾಲಯ, ಶಿಕ್ಷಣ ಕೇಂದ್ರಗಳನ್ನು ನಿರ್ಮಿಸಿ ಮಾದರಿಯಾದವರು. ಅಧ್ಯಾತ್ಮ ದುಃಖ, ಆದಿ ಭೌತಿಕ ದುಃಖ, ಆದಿ ದೈವಿಕ ದುಃಖ ತಡೆಯುವುದೇ ಯಾಗದ ಉದ್ದೇಶ. ಧರ್ಮ ಮೆರೆದಾಗ ಮನುಷ್ಯ ಮಾನವೀಯತೆ ಮೆರೆಯುತ್ತಾನೆ ಎಂದರು.
ಶ್ರೀ ನಾರಾಯಣ ಗುರು ವೈದಿಕ ಸಮಿತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕೇರಳ ಶಿವಗಿರಿ ಮಠದ ಕಿರಿಯ ಸ್ವಾಮೀಜಿ ಗಿರಿಜಾನಂದ, ಸಂಘದ ವ್ಯಾಪ್ತಿಗೊಳಪಟ್ಟ ಗ್ರಾಮಗಳ ಬರ್ಕೆ ಮನೆತನದ ಗುರಿಕಾರರು, ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‌ನ ಧರ್ಮಗುರು ಹೆರಾಲ್ಡ್ ಮಸ್ಕರೇನ್ಹಸ್, ಪಣಪಿಲ ಅರಮನೆ ವಿಮಲ್ ಕುಮಾರ್, ಮಜಲೋಡಿ ಗುತ್ತು ಪ್ರಮೋದ್ ಅರಿಗ, ಶ್ರೀ ಬ್ರಹ್ಮ ರೆಸಿಡೆನ್ಸಿ ಮಾಲೀಕ ಸತೀಶ್ ವಿ.ಶೆಟ್ಟಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ., ಉಪಾಧ್ಯಕ್ಷ ಈಶ್ವರ್ ಕಟೀಲ್, ಕೆಪಿಸಿಸಿ ಸದಸ್ಯ ಚಂದ್ರಹಾಸ್ ಸನಿಲ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಇರುವೈಲ್ ಪಾನಿಲ ಸತೀಶ್ಚಂದ್ರ, ಅಳಿಯೂರು ಉಮಲತ್ತಡೆ ಗರಡಿ ಅಧ್ಯಕ್ಷ ಪ್ರವೀಣ್ ಭಟ್, ಕಾರ್ಯದರ್ಶಿ ಹರ್ಷವರ್ಧನ ಪಡಿವಾಳ್ ಭಾಗವಹಿಸಿದ್ದರು.
ವೈದಿಕ ಸಮಿತಿ ಮಾಜಿ ಅಧ್ಯಕ್ಷ ಸೋಮನಾಥ್ ಶಾಂತಿ ಕಂದಿರು ನೇತೃತ್ವದಲ್ಲಿ ಸಮಿತಿ ಅಧ್ಯಕ್ಷ ಹರೀಶ್ ಶಾಂತಿ ಮಾರ್ಗದರ್ಶನದಲ್ಲಿ 60 ಮಂದಿ ಶಾಂತಿಯವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ಯಾಗ ಸಮಿತಿ ಸಂಚಾಲಕ ವಿಶ್ವನಾಥ್ ಕೋಟ್ಯಾನ್ ಹನ್ನೇರ್- ಅಶ್ವಿನಿ ದಂಪತಿ ಪೂಜಾ ಸಂಕಲ್ಪ ಕೈಗೊಂಡರು. ಸಮುದಾಯದ 50ಕ್ಕೂ ಅಧಿಕ ಸಂಘ ಸಂಸ್ಥೆಗಳು ಸಹಕರಿಸಿದರು.
ಯಾಗ ಮುಂಚಿತವಾಗಿ ಗುರುಪೂಜೆ, ನಂತರ ಉಮೇಶ್ ಮಿಜಾರ್ ಬಳಗದ ಹಾಸ್ಯ ಮನೋರಂಜನೆ ಜರುಗಿತು.
ಅಗ್ನಿ ಬಾಹ್ಯ ಕಲ್ಮಶಗಳನ್ನು ನಾಶಪಡಿಸುವ ಗುಣಧರ್ಮ ಉಳ್ಳದ್ದು. ಶ್ರದ್ಧಾ ಭಕ್ತಿಯಿಂದ ಕೂಡಿದ ಯಾಗ ಸನ್ಮಂಗಲ ಸೃಷ್ಟಿಸಲಿದೆ. ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಪೀಠಾಧಿಪತಿ, ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ ರೇಣುಕಾ ಮಠ