

ಕಡೂರು: ಪ್ರಪಂಚಕ್ಕೆ ವಿಶ್ವ ಕರ್ಮರ ಕೊಡುಗೆ ಅಪಾರವಾಗಿದ್ದು, ಅಮರ ಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯಿಂದ ನಿರ್ಮಾಣವಾದ ಬೇಲೂರು-ಹಳೆಬೀಡು ದೇವಾಲಯ ಜಗತ್ ಪ್ರಸಿದ್ಧವಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಕಣಾಚಾರಿ ನಿರ್ಮಿಸಿರುವ ದೇವಾಲಯಗಳು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಎಲ್ಲಿಯೂ ಲೋಪವಿಲ್ಲದೆ ಶ್ರದ್ದೆ, ಭಕ್ತಿಯಿಂದ ಕಾರ್ಯನಿರ್ವಹಿಸಿದ್ದರ ಲದಿಂದ ಇಂದು ವಿಶ್ವದಲ್ಲಿಯೇ ಶ್ರೇಷ್ಠ ಶಿಲ್ಪಿಯಾಗಲು ಸಾಧ್ಯವಾಗಿದೆ ಎಂದರು.
ಸಖರಾಯಪಟ್ಟಣದ ಮುಖಂಡ ಎಸ್.ಪಿ.ಓಂಕಾರಮೂರ್ತಿ ಮಾತನಾಡಿ, 900 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಕೈದಾಳ ಗ್ರಾಮದ ಜಕಣಾಚಾರಿ ಕೌಟುಂಬಿಕ ಸಮಸ್ಯೆಯಿಂದ ಮನೆ ಬಿಟ್ಟು ಹೊರಟು ಹೋದ ಬಳಿಕ ಸೋಮನಾಥಪುರದ ದೇವಾಲಯವನ್ನು ಸುಂದರವಾಗಿ ಕೆತ್ತಿರುವ ಉಲ್ಲೇಖವಿದೆ. ಹಳೆಬೀಡಿನ ದೇವಾಲಯವನ್ನು ನಿರ್ಮಿಸುವ ಕಾಲದಲ್ಲಿ ರಾಜ ವಿಷ್ಣುವರ್ಧನು ಜಕಣಾಚಾರಿ ಅವರ ಕೆತ್ತನೆಯ ಕಂಡು ಬೆರಗಾಗಿ ಬೇಲೂರಿನ ದೇವಾಲಯವನ್ನು ನಿರ್ಮಿಸುತ್ತಾನೆ ಎಂದರು. ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ತೀರ್ಥಚಾರ್, ಹನುಮಂತ ಆಚಾರ್, ಮಹೇಶ್ವರಚಾರ್, ತ್ಯಾಗರಾಜ್ ಆಚಾರ್,ಸಿದ್ದೇಶ್ವಚಾರ್, ಪ್ರಕಾಶ್‌ಚಾರ್, ಕಲ್ಲೇಶ್‌ಚಾರ್, ವಾಸುದೇವಮೂರ್ತಿ, ಆರ್.ಟಿ.ಮಂಜುನಾಥ್‌ಚಾರ್, ಗಂಗಾಧರ್‌ಚಾರ್, ಚಿದಾನಂದಮೂರ್ತಿ ಮತ್ತಿತರಿದ್ದರು.